Header Ads
Breaking News

ಉಚ್ಚಿಲ ಪೊಲ್ಯ ಮುಖ್ಯ ರಸ್ತೆಯಲ್ಲಿ ಹರಿಯುತ್ತಿದೆ ತ್ಯಾಜ್ಯನೀರು : ಯಾವುದೇ ಕ್ರಮಕ್ಕೆ ಮುಂದಾಗದ ಸ್ಥಳೀಯಾಡಳಿತ

ಉಚ್ಚಿಲ ಬಡಾ ಗ್ರಾಮದ ಮುಖ್ಯ ಪೇಟೆಯ ಹೃದಯ ಭಾಗದಲ್ಲಿ ರೆಸ್ಟೋರೆಂಟ್‍ವೊಂದರಿಂದ ತ್ಯಾಜ್ಯ ನೀರು ಹರಿದು ಪರಿಸರವಿಡೀ ದುರ್ವಾಸನೆ ಬೀರುತ್ತಿದೆ. ಪೊಲ್ಯ ಮುಖ್ಯ ರಸ್ತೆಯಲ್ಲಿ ಕಳೆದ ಹತ್ತು ತಿಂಗಳಿಂದಲೂ ತ್ಯಾಜ್ಯ ನೀರು ಹರಿಯುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ.

ವಾಯ್ಸ್: ಪೊಲ್ಯದ ಮುಖ್ಯ ರಸ್ತೆಯಲ್ಲಿ ಕಳೆದ ಸುಮಾರು ಹತ್ತು ತಿಂಗಳಿಂದ ತ್ಯಾಜ್ಯ ನೀರು ಹರಿಯುತ್ತಿದೆ. ಉಚ್ಚಿಲ ಪೇಟೆಯ ಮಧ್ಯಭಾಗದಲ್ಲಿನ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್‍ನ ಡ್ರೈನೇಜ್ ನೀರು ನೇರವಾಗಿ ಮಳೆನೀರು ಹರಿದು ಹೋಗುವ ಚರಂಡಿಯಲ್ಲಿ ಹರಿಯುತ್ತಿದೆ. ಈ ಪ್ರದೇಶದಲ್ಲಿ ವಾಣಿಜ್ಯ ಸಂಕೀರರ್ಣ ಸಹಿತ ಸುತ್ತಲೂ ವಾಸದ ಮನೆಗಳಿದ್ದು, ಈ ದುರ್ನಾತದಿಂದಾಗಿ ಮನೆಮಂದಿ ವಾಂತಿ ಮಾಡಿಕೊಳ್ಳುತ್ತಿದ್ದು ವಾಸ ಮಾಡಲೂ ಅಸಾಧ್ಯ ಎಂಬಂತ್ತಾಗಿದೆ. ಅದಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದರಿಂದ ವಾಹನಗಳು ಸಂಚರಿಸುವ ವೇಳೆ ಈ ದುರ್ನಾತ ತ್ಯಾಜ್ಯ ನೀರು ಪಾದಚಾರಿಗಳ ಮೇಲೆ ಎರಚಿ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
 ಈ ಬಗ್ಗೆ ಮಾತನಾಡಿ ಸ್ಥಳೀಯ ನಿವಾಸಿ ವೇದವ್ಯಾಸ ಬಂಗೇರ ಅವರು, ಈ ಸಮಸ್ಯೆ ಬಗ್ಗೆ ಬಾರ್ ಮಾಲಿಕರ ಗಮನಕ್ಕೆ ನಾವು ತಂದಾಗ ಅವರು ಉಢಾಪೆ ಉತ್ತರ ನೀಡುತ್ತಾರೆ. ಗ್ರಾ.ಪಂ.ನ ಗಮನಕ್ಕೆ ತರಲಾಗಿದೆಯಾದರೂ ಈವರಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ವಚ್ಚತೆಯ ಬಗ್ಗೆ ಜಿಲ್ಲಾಡಳಿತ ಪಾಠ ಮಾಡುತ್ತಿದೆಯಾದರೂ ಈ ಮಾರಕ ರೋಗಗಳ ತಾಣವಾಗಿರುವ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮುಂದಿನ ದಿನದಲ್ಲಾದರೂ ಈ ಬಗ್ಗೆ ತೀವೃ ನಿಗಾ ವಹಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಈ ಭಾಗದ ಜನರನ್ನು ಮಾರಕ ರೋಗಭೀತಿಯಿಂದ ಮುಕ್ತಗೊಳಿಸ ಬೇಕಾಗಿದೆ ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಉಚ್ಚಿಲ ಬಡಾ ಗ್ರಾಮದ ಮುಖ್ಯ ಪೇಟೆಯ ಹೃದಯ ಭಾಗದಲ್ಲಿ ತ್ಯಾಜ್ಯ ನೀರು ಹರಿದು ದುರ್ವಾಸನೆ ಬೀರುತ್ತಿದೆ. ಶೀಘ್ರದಲ್ಲಿ ಈ ಸಮಸ್ಯೆಗೆ ಸ್ಥಳೀಯಾಡಳಿತ ಮುಕ್ತಿ ನೀಡಲಿ ಎಂಬುವುದೇ ವಿ4 ನ್ಯೂಸ್‍ನ ಆಶಯ

Related posts

Leave a Reply

Your email address will not be published. Required fields are marked *