
ಜನ ಸಾಮಾನ್ಯರಿಗೆ ಕಾನೂನಿನ ಪಾಠ ಮಾಡ ಬೇಕಾಗಿದ್ದ ಗ್ರಾ.ಪಂ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ, ಜನರ ತೆರಿಗೆ ಹಣ ಸುಮಾರು ಎರಡೂವರೆ ಲಕ್ಷ ರೂಪಾಯಿ ವ್ಯಯ ಮಾಡಿ ಹೆದ್ದಾರಿ ಇಲಾಖೆ ಸರ್ವಿಸ್ ರಸ್ತೆಗಾಗಿ ಕಾದಿರಿಸಿದ ಸ್ಥಳದಲ್ಲಿ ಕಟ್ಟಡವೊಂದನ್ನು ನಿರ್ಮಿಸಿದ್ದು, ಇದೀಗ ಹೆದ್ದಾರಿ ಇಲಾಖೆ ಆ ಕಟ್ಟಡವನ್ನು ತೆರವುಗೊಳಿಸುವ ಮೂಲಕ ಜನರ ತೆರಿಗೆ ಹಣ ಮಣ್ಣು ಪಾಲಾದಂತ್ತಾಗಿದೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಸಿರಾಜ್ ಉಚ್ಚಿಲ, ಹೆದ್ದಾರಿ ಅಂಚಿನಲ್ಲಿದ್ದು ಇಂದೋ ನಾಳೆಯೋ ಇಲಾಖೆ ವಶಪಡಿಸಿಕೊಳ್ಳುತ್ತೆ ಎಂಬ ಮಾಹಿತಿ ಇದ್ದರೂ, ಯಾರದ್ದೋ ಹಣ ಯಲ್ಲವ್ವನ ಜಾತ್ರೆ ಎಂಬಂತ್ತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆಲ ಸದಸ್ಯರ ತಾಳಕ್ಕೆ ಕುಣಿದು ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಡ ನಿರ್ಮಿಸಿ ನಾಲ್ಕು ತಿಂಗಳು ಕಳೆದಿದೆ. ಆ ಕಟ್ಟಡವನ್ನು ಊಪಯೋಗಿಸುವುದಕ್ಕೂ ಮುನ್ನವೇ ಹೆದ್ದಾರಿ ಇಲಾಖೆ ಕಾನೂನು ಬದ್ಧವಾಗಿ ವಶಪಡಿಸಿಕೊಂಡು ತೆರವು ನಡೆಸುವ ಮೂಲಕ ಜನರ ತೆರಿಗೆ ಹಣ ಪೋಲಾಗಿದೆ. ಗ್ರಾ.ಪಂ. ಅಧಿಕಾರಿಯ ಬೇಜವ್ದಾರಿಯಿಂದ ಮಣ್ಣುಪಾಲದ ಈ ಹಣವನ್ನು ಬರಿಸ ಬೇಕಾದವರು ಯಾರು..? ಈ ಬಗ್ಗೆ ಮೇಲಾಧಿಕಾರಿಗಳು ತಕ್ಷಣವೇ ಜನ ಸಾಮಾನ್ಯರಿಗೆ ಮಾಹಿತಿ ನೀಡುವಂತ್ತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಉತ್ತರಿಸಿದ ಉಚ್ಚಿಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ, ಮೀನು ಮಾರುಕಟ್ಟೆಗಾಗಿ ಕಟ್ಟಡ ನಿರ್ಮಾಣ ಮಾಡಿದ್ದು ಹೌದು, ಅನುಮತಿಗಾಗಿ ಹೆದ್ದಾರಿ ಇಲಾಖೆಗೆ ಬರೆಯಲಾಗಿದೆ, ಈ ಕಟ್ಟಡದ ಬಿಲ್ಲ್ ಪಾವತಿಯಾಗಿಲ್ಲ ಮುಂದಿನ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದೆಂದರು.