Header Ads
Breaking News

ಉಜಿರೆಎಸ್.ಡಿ.ಎಂಕಾಲೇಜಿನಲ್ಲಿ“ವಿಜ್ಞಾನ ಸಿಂಚನ 2020”ಅಂತರ್‍ಕಾಲೇಜು ಸ್ಪರ್ಧೆ

ಪ್ರಯೋಗಗಳನ್ನು ನಡೆಸಲು ಕೇವಲ ಪ್ರಯೋಗಾಲಯಗಳನ್ನು ಮಾತ್ರ ಅವಲಂಬಿಸಬೇಕಾಗಿಲ್ಲ. ಪರಿಸರವೇಒಂದು ಪ್ರಯೋಗಾಲಯ.ದಿನನಿತ್ಯದ ನಮ್ಮಚಟುವಟಿಕೆಯಲ್ಲಿ ಸುತ್ತಮುತ್ತಲಿನ ಬದಲಾವಣೆಗಳನ್ನು, ಹೊಸ ಆವಿಷ್ಕಾರಗಳನ್ನು, ಗಮನಿಸಿದಷ್ಟು ನಮ್ಮಲ್ಲಿ ಕ್ರಿಯಾಶೀಲತೆ ಹೆಚ್ಚಾಗುತ್ತದೆ, ಜೊತೆಗೆಕುತೂಹಲ ಬೆಳೆಯುತ್ತದೆ. ಆಗ ನಮ್ಮಿಂದ ಹೊಸ ಆವಿಷ್ಕಾರಗಳನ್ನು ನಡೆಸಲು ಸಾಧ್ಯಎಂದುಉಜಿರೆಎಸ್.ಡಿ.ಎಂಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥಡಾ.ಬಿ.ಎಕುಮಾರ್ ಹೆಗಡೆ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜಿನಭೌತಶಾಸ್ತ್ರ ಮತ್ತುರಸಾಯನಶಾಸ್ತ್ರವಿಭಾಗದ ಸಹಯೋಗದೊಂದಿಗೆಎಸ್.ಡಿ.ಎಂಕಾಲೇಜಿನಲ್ಲಿರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದಅಂತರ್‍ಕಾಲೇಜು ಸ್ಪರ್ಧೆ“ವಿಜ್ಞಾನ ಸಿಂಚನಾ 2020”ಕಾರ್ಯಕ್ರಮದಲ್ಲಿಮುಖ್ಯಅತಿಥಿಯಾಗಿ ಪಾಲ್ಗೊಂಡುಅವರುಮಾತನಾಡಿದರು.

ಈಗಿನ ಯುಗದಲ್ಲಿತಂತ್ರಜ್ಷಾನ ಬೆಳೆದಷ್ಟು ಪ್ರಯೋಗಗಳು ಕೂಡ ಹೆಚ್ಚಾಗುತ್ತಿವೆ ಈ ಕಾರಣದಿಂದಾಗಿ ಪಠ್ಯದಜೊತೆಗೆ ವಿದ್ಯಾರ್ಥಿಗಳಿಗೆ ಪೂರಕವಾಗಲು ವಿಚಾರಗೋಷ್ಟಿ, ಕ್ಷೇತ್ರಅಧ್ಯಯನ, ಕಾರ್ಯಗಾರ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸಬೇಕು, ಇದರಿಂದ ವಿದ್ಯಾರ್ಥಿಗಳಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳುವ ಮನೋಭಾವನೆ ಬೆಳೆಯುತ್ತದೆ ಎಂದರು ನುಡಿದರು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ಈ ವರ್ಷದ ವಿಜ್ಞಾನ ಸಿಂಚನ ಸ್ಪರ್ಧೆಯು ವಿಶೇಷವಾಗಿ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದಕುರಿತು ನಡೆಯಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಶೇಷವಾಗಿ ಹೆಣ್ಣುಮಕ್ಕಳು ವಿಜ್ಞಾನಕ್ಷೇತ್ರದಲ್ಲೂ ಮುಂದುವರಿಯಬೇಕುಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 7 ಕಾಲೇಜಿನ ಸುಮಾರು 75 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಫ್ರೋ.ಎಸ್.ಎನ್‍ಕಾಕತ್ಕರ್, ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥಡಾ. ವಿಶ್ವನಾಥ್.ಪಿಉಪಸ್ಥಿತರಿದ್ದರು. ಸ್ವಾತಿ ನಿರೂಪಿಸಿದರು, ಸಾಯಿದೀಪ್ ಭಟ್ ವಂದಿಸಿದರು.

Related posts

Leave a Reply

Your email address will not be published. Required fields are marked *