Header Ads
Header Ads
Header Ads
Breaking News

ಉಜಿರೆಯಲ್ಲಿ ಉದ್ಘಾಟನೆಗೊಂಡ ‘ವನರಂಗ’

ಉಜಿರೆ: ಕಲೆ ಮತ್ತು ಸಂಸ್ಕೃತಿಯ ಅನಾವರಣದಿಂದ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬಹುದು. ಜನರ ಮನಸ್ಸನ್ನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಲೆಗಿದೆ. ಇಂತಹ ಕಲೆಯ ಪೋಷಣೆ ಕಲಾವಿದರು ಮತ್ತು ಸಹೃದಯ ಕಲಾಭಿಮಾನಿಗಳಂದ ಮಾತ್ರ ಸಾಧ್ಯ. ಎಂದು ಧರ್ಮಸ್ಥಳದ ಹೆಮಾವತಿ.ವಿ.ಹೆಗಡೆ ತಿಳಿಸಿದರು.
ಸೋಮವಾರ ಉಜಿರೆಯ ನೂತನ ಬಯಲು ರಂಗಮಂದಿರ ವನರಂಗವನ್ನ ಉದ್ಘಾಟಿಸಿ ಮಾತನಾಡಿದ ಇವರು ಸಂಗೀತ ಸಾಹಿತ್ಯ ಯಕ್ಷಗಾನ ಮೊದಲಾದ ಕಲೆಗಳು ನಮಗೆ ನೈತಿಕ ಶಿಕ್ಷಣವನ್ನ ನೀಡುತ್ತವೆ ಇವುಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ರಾಮಾಯಣ ಮಹಾಭಾರತದಂತ ಮಹಾನ್ ಕಾವ್ಯಗಳು ಇಂದಿಗೂ ಜನಮಾನಸದಲ್ಲಿ ಹೆಸರಾಗಿದೆಯಂದರೆ ಅದಕ್ಕೆ ಕಾರಣ ಕಲಾವಿದರು ಎಂದರು. ವಿನೂತನ ರಂಗಮಂದಿರದಿಂದಾಗಿ ನನ್ನ ಬಹುದಿನಗಳ ಕನಸು ನನಸಾದಂತಾಗಿದೆಯೆಂದು ಸಂತಸ ವ್ಯಕ್ತಪಡಿಸಿದರು ಹಾಗೆಯೇ ಈ ರಂಗಮಂದಿರಕ್ಕೆ ಎಂದಿಗೂ ಬಿಡುವಿಲ್ಲದಂತಾಗಲಿ ಎಂದು ಹಾರೈಸಿ, ರಂಗಮಂದಿರವು ಸುತ್ತಲೂ ಉತ್ತಮ ಪರಿಸರ ಹೊಂದಿರುವುದರಿಂದ ಕಲೆಯ ಜೊತೆಗೆ ಪ್ರಕೃತಿಯನ್ನು ಆಸ್ವಾದಿಸಬಹುದು ಎಂದು ಅಭಿಪ್ರಾಯಪಟ್ಟರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಡೆ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಎಸ್.ಡಿ.ಎಂ ವಿದ್ಯಾರ್ಥಿಗಳು ಹೇಮಾವತಿ ಹಗ್ಡೆಯವರ ಪ್ರೇರಣೆಯಿಂದ ನಿರ್ಮಿತವಾಗಿರುವ ಬಯಲುರಂಗಮಂದಿರವನ್ನು ಸರಿಯಾಗಿ ಬಳಸಿಕೊಂಡು ಯಶಸ್ವಿಯಾಗಿ ಎಂದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಕಾರ್ಯದರ್ಶಿ ಬಿ.ಹರ್ಷೇಂದ್ರ ಕುಮಾರ್, ಹಾಗೂ ಗ್ರಾ.ಪಂ. ಅಧ್ಯಕ್ಷ ಶ್ರೀಧರ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದರು. ಕಾರ್ಯಕ್ರಮವನ್ನು ಬಿ.ಎ.ಕುಮಾರ್ ಹೆಗ್ಡೆ ನಿರೂಪಿಸಿ,ಬಿ.ಯಶೋವರ್ಮ ಸ್ವಾಗತಿಸಿ, ಬಿ. ಸೋಮಶೇಖರ ಶೆಟ್ಟಿ ವಂದಿಸಿದರು.

Related posts

Leave a Reply

Your email address will not be published. Required fields are marked *