Header Ads
Breaking News

ಉಜಿರೆಯಲ್ಲಿ ಎಸ್‌ಡಿಎಮ್ ಕಾಲೇಜಿನ ವಾರ್ಷಿಕೋತ್ಸವ : ಸಾಧನೆ ಮಾಡಿದ ವಿದ್ಯಾರ್ಥಿ ಅಧ್ಯಾಪಕರಿಗೆ ಸನ್ಮಾನ

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂಭ್ರಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮಕ್ಕೆ ಮಖ್ಯ ಅಥಿತಿಯಾಗಿ ಆಗಮಿಸಿದ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎ.ಎಸ್.ಕಿರಣ್ ಕುಮಾರ್ ಮಾತನಾಡಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ ನೀಡುತ್ತಿದ್ದಾರೆ. ದೇಶದಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳಿವೆ ಕೇವಲ ಶಿಕ್ಷಣ ನೀಡುತ್ತವೆ ಆದರೆ ಇಲ್ಲಿ ನೀವು ಜೀವನ ಶಿಕ್ಷಣ ನೀಡುತ್ತಿದ್ದೀರಿ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಬೇಕು ಸಮಾಜಕ್ಕೆ ಉಪಕಾರವಾಗುವಂತೆ ಬಾಳಬೇಕು. ಎಂದು ಇಸ್ರೋ ಸಂಸ್ಥೆಯ ಸಾಧನೆ ಮತ್ತು ವಿಜ್ಞಾನ ತಂತ್ರಜ್ಞಾನದ ಬಗ್ಗೆ ತಿಳಿಸಿದರು.ಬಳಿಕ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವಿರೇಂದ್ರ ಹೆಗ್ಗಡೆಯವರು ಮಾತನಾಡಿ ಮಾನವರಾದ ನಮ್ಮಲ್ಲಿ ಭಕ್ತಿ ಮತ್ತು ಶ್ರದ್ಧೆ ಅಗತ್ಯ ಆಗ ಮಾತ್ರ ನಾವು ಪ್ರಾರ್ಥಿಸುವ ಪ್ರಾರ್ಥನೆ ದೇವರಿಗೆ ತಲುಪಲು ಸಾಧ್ಯ ವಿಜ್ಞಾನ ಮತ್ತು ನಮ್ಮ ನಂಬಿಕೆಗೆ ಬಹಳಾ ಹತ್ತಿರದ ಸಂಬಂಧವಿದೆ ಅನೇಕ ಜನ ವಿಜ್ಞಾನಕ್ಕೆ ಸೇವೆ ಮಾಡಿದವರಿದ್ದಾರೆ ವಿಜ್ಞಾನ ತಂತ್ರಜ್ಞಾನದಲ್ಲಿ ಸೇವೆ ಸಲ್ಲಿಸಿ ದೇಶದ ಏಳಿಗೆಗೆ ಶ್ರಮಿಸಿದವರಿದ್ದಾರೆ ಅಂತವರಲ್ಲಿ ಎ.ಎಸ್.ಕಿರಣ್ ಕುಮಾರ್ ಒಬ್ಬರು ಎಂದು ಹೇಳಿದರು.ಈ ಸಂದರ್ಭ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಗೌರವಿಸಲಾಯಿತು.
ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದವರ ಮನಸೂರೆಗೊಳಿಸಿತು.ಈ ಸಂದರ್ಭ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ.ಸುರೇಂದ್ರ ಕುಮಾರ್, ಕಾರ್ಯದರ್ಶಿಗಳಾದ ಡಾ.ಬಿ.ಯಶೋವರ್ಮ, ಪ್ರೋಫೆಸರ್ ಎಸ್. ಪ್ರಭಾಕರ್, ಪ್ರಾಂಶುಪಾಲರಾದ ಪ್ರೋಫೆಸರ್ ಟಿ.ಎನ್.ಕೇಶವ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *