Header Ads
Breaking News

ಉಜಿರೆಯಲ್ಲಿ ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ

ಕರ್ನಾಟಕ  ಯಕ್ಷಗಾನ ಅಕಾಡೆಮಿಯು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಹಯೋಗದಲ್ಲಿ ಜನವರಿ 11ಹಾಗೂ12ರಂದು ಎರಡು ದಿನಗಳ ಕಾಲ ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತುದಾಖಲೀಕರಣಕಾರ್ಯಕ್ರಮ ಹಮ್ಮಿಕೊಂಡಿದೆ.ಉಜಿರೆಯಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಯೋಜನೆಯಲ್ಲಿ ಈ ವಿಶೇಷ ಕಾರ್ಯಕ್ರಮ ಸಿದ್ಧವನ ಗುರುಕುಲದಲ್ಲಿ ನಡೆಯಲಿದೆ. ಜನವರಿ 11ರಂದು ಶನಿವಾರ ಬೆಳಿಗ್ಗೆ 10ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಅವರು ಪ್ರಾತ್ಯಕ್ಷಿಕೆಯನ್ನುಉದ್ಘಾಟಿಸಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿಯಅಧ್ಯಕ್ಷ ಪ್ರೊ.ಎಂ.ವಿ.ಹೆಗಡೆಅಧ್ಯಕ್ಷತೆ ವಹಿಸುವರು. ಹಿರಿಯ ಹಾಸ್ಯಗಾರಪೆರುವಡಿ ನಾರಾಯಣ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಬಡಗಿನ ಬೇಹಿನಚರ, ದಾರುಕ, ದೇವದೂತ, ರಕ್ಕಸದೂತ, ಕುದುರೆದೂತ, ವನಪಾಲಕಿ, ಕಂದರ ಹಾಗೂ ತೆಂಕಿನ ಹೊಗಳಿಕೆ/ಹನುಮನಾಯಕ, ಮಂತ್ರವಾದಿ/ಕೊರವಂಜಿ/ಭೈರಾಗಿ, ರಂಗ-ರಂಗಿ, ಸಿಂಗ-ಸಿಂಗಿ ಇವುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ಮೊದಲ ದಿನ ನಡೆಯಲಿದೆ. ಅದೇ ದಿನ ಸಂಜೆ ೬ರಿಂದ ಉಜಿರೆಯಗೋವಿಂದಕಲಾಭಾವಾರ್ಪಣ ಸಂಯೋಜನಾ ಸಮಿತಿಯಿಂದಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಎರಡನೇ ದಿನ ಜ.12ರಂದು ಅಪಶಕುನಗಳು, ಮಡಕೆ ಮಾರುವವ, ಸೌದೆ ಮಾರುವವ, ಕಳ್ಳು ಮಾರುವವ, ಹರಿವೆ ಸೊಪ್ಪು ಮಲ್ಲಮ್ಮ, ಉರ್ದು ಸಾಯ್ಬ, ಮಾಪಿಳ್ಳೆ, ಕಿರಿಸ್ತಾನ್ ನರಸಣ್ಣ, ಗಾಣಿಗ, ಅಂಡುಕುಟ್ಟಿ ಹಾಗೂ ದೇವದೂತ, ರಕ್ಕಸದೂತ, ಬ್ರಹ್ಮ, ನಾರದ, ಜ್ಯೋತಿಷಿ, ವಿದ್ಯುಜ್ಜಿಹ್ವ, ಬಾಹುಕ, ಪಾಪಣ್ಣ ಇವುಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರಕುಮಾರ್ ಹಾಗೂ ಡಾ.ಬಿ.ಯಶೋವರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರೊ.ಎಂ.ಎ.ಹೆಗಡೆಅಧ್ಯಕ್ಷತೆ ವಹಿಸುವರುಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *