Header Ads
Breaking News

ಉಜಿರೆಯಲ್ಲಿ ಲಿಟ್ ಫೆಸ್ಟ್ – ಪೂರ್ವ ತಯಾರಿ ಸಭೆ

ಭಾರತೀಯ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಬರುವ ಎಪ್ರಿಲ್ರಂ12ದು ಉಜಿರೆಯಲ್ಲಿ ಲಿಟ್ ಫೆಸ್ಟ್ ಸಾಹಿತ್ಯ ಸಂಭ್ರಮ ನಡೆಸಲು ತೀರ್ಮಾನಿಸಲಾಗಿದೆ.
ಲಿಟ್ ಫೆಸ್ಟ್ ಹಿನ್ನಲೆಯಲ್ಲಿ 23ರಂದು ಭಾನುವಾರ ಉಜಿರೆಯ ಶಾರದಾ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಚಿಂತನೆಗೆ ಪೂರಕವಾಗಿ ಈ ಸಮ್ಮೇಳನ ನಡೆಯಲಿದೆ. ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಒಂದು ದಿನದ ಕಾರ್ಯಕ್ರಮದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೂ ಅವಕಾಶ ದೊರೆಯಬೇಕೆಂಬ ಬಗ್ಗೆ ಆಶಯ ಹಾಗೂ ನಿರ್ಣಯ ವ್ಯಕ್ತವಾಯಿತು.

ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಡಾ. ದಯಾಕರ್, ಡಾ. ಶ್ರೀಧರ್ ಭಟ್, ಕೃಷ್ಣ ಶೆಟ್ಟಿ, ಕೇಶವ ಭಟ್ ಅತ್ತಾಜೆ, ರಮೇಶ್ ಮಯ್ಯ, ಶಿವಪ್ರಸಾದ್ ಸೂರ್ಯ, ಜನಾರ್ಧನ ಸೂರ್ಯ, ರಾಮಕೃಷ್ಣ ಭಟ್ ಬೆಳಾಲು, ಶ್ರೀಮತಿ ಸುಭಾಷಿಣಿ, ಪ್ರಕಾಶ್‌ನಾರಾಯಣ ಹಾಗೂ ಭಾಸ್ಕರ್ ಹೆಗಡೆಯವರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರೆಂದು ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *