Header Ads
Header Ads
Header Ads
Breaking News

ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪೇಜಾವರ ಶ್ರೀಗಳಿಗೆ ನುಡಿನಮನ

ಉಜಿರೆ: ನಾಡು ಕಂಡ ಶ್ರೇಷ್ಠ ಸಂತ ಮುಗ್ದ ಮನಸ್ಸಿನ ಪೇಜಾವರ ಶ್ರೀ, ಕಷ್ಣಪಾದ ಸೇರಿದ ಹಿನ್ನೆಲೆಯಲ್ಲಿ ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಸಂತಾಪ ಸೂಚಕ ಸಭೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಎಸ್. ಸತೀಶ್ಚಂದ್ರ ಶ್ರೀಗಳಿಗೆ ನುಡಿನಮನ ಸಲ್ಲಿಸಿ ಶ್ರೀಗಳ ಶ್ರೇಷ್ಠ ವ್ಯಕ್ತಿತ್ವವನ್ನು ಕೊಂಡಾಡಿದರು. ಎಸ್.ಡಿ. ಎಂ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳು ಮಾರ್ಗದರ್ಶಕರಾಗಿಯೂ ಹತ್ತಿರದ ಸಂಬಂದ ಹೊಂದಿದ್ದರು ಎಂದು ನೆನಪಿಸಿಕೊಂಡರು.

ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ, ಶ್ರೀಗಳ ಶಿಷ್ಯ, ರಾಮಚಂದ್ರ ಪುರೋಹಿತ ಮಾತನಾಡಿ ಶ್ರೀಗಳ ಸೇವಾಕಾರ್ಯ ಹಾಗು ಅನುಪಮ ವ್ಯಕ್ತಿತ್ವವನ್ನು ಗುಣಗಾನ ಮಾಡಿದರು. ಇಳಿವಯಸ್ಸಿನಲ್ಲಿಯೂ ಸಿರಂತರವಾಗಿ ರಾಷ್ಟ್ರದಾದ್ಯಂತ ಸಂಚರಿಸುವ ಅಪೂರ್ವ ವ್ಯಕ್ತಿ ಸ್ವಾಮಿಗಳು ಅಲ್ಲದೆ ಸರ್ವಧರ್ಮದವರಲ್ಲೂ ಸಮಾಭಾವ ಕಂಡು ಎಲ್ಲರ ಒಳಿತಿಗಾಗಿ ದುಡಿದವರು ಪೇಜಾವರು ಶ್ರಿಗಳು ಎಂದು ಶ್ಲಾಘಿಸಿದರು.ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಶ್ರೀಧg ಭಟ್ ಧರ್ಮಸ್ಥಳದ ಬಗ್ಗೆ ಶ್ರೀಗಳಿಗಿರುವ ಸಂಬಒಧವನ್ನು ಸ್ಮರಿಸಿದರು. ಈ ಸಂದರ್ಬದಲ್ಲಿ ಕಾಲೇಜಿನ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಶ್ರಿಯುತರ ಅಗಲುವಿಕೆಯ ಹಿನ್ನಲೆಯಲ್ಲಿ ಗೌರವ ಸೂಚಕವಾಗಿ ಉಜಿರೆಯ ಎಲ್ಲಾ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ರಜೆ ಸಾರಲಾಗಿತ್ತು.

Related posts

Leave a Reply

Your email address will not be published. Required fields are marked *