Header Ads
Header Ads
Breaking News

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ‘ಇನ್ ಸೈಡ್ ದಿ ವಾಲ್’ ಕಾರ್ಯಾಗಾರ

ಬರೀ ಕನಸನ್ನೇ ಕಟ್ಟಿಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ. ಆ ಕನಸನ್ನು ಸರಿದೂಗಿಸಿಕೊಳ್ಳುವಲ್ಲಿನ ನಿರಂತರ ಪ್ರಯತ್ನ ಬಹಳ ಮುಖ್ಯ ಎಂದು ಕಲರ್ಸ್ ಕನ್ನಡ ವಾಹಿನಿ ತಂಡದ ರಂಜಿತ್ ಗೌಡ ನಿಡಗೋಡು ಹೇಳಿದರು.ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಬುಧವಾರದಂದು ಆಯೋಜಿಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಮ್ಮ ಸಾಮಥ್ರ್ಯ ಮತ್ತು ಪ್ರತಿಭೆಯ ಮೇಲೆ ಮೊದಲು ನಮಗೆ ನಂಬಿಕೆ ಇರಬೇಕು. ಆಗ ಮಾತ್ರ ಮಹತ್ವದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಮ್ಮ ಪರಿಶ್ರಮ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.ಜೀವನದಲ್ಲಿ ಹಿಂದೆ ಆದ ಘಟನೆಗಳನ್ನು ಮೆಲುಕು ಹಾಕುವ ಮತ್ತು ಆ ಮೂಲಕ ಹಿಂದೆ ಇದ್ದ ಪರಿಸ್ಥಿತಿಗಿಂತ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಕಾರ್ಯಾಗಾರದಲ್ಲಿ ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಣ ವಿಭಾಗದ ಪ್ರಜ್ವಲ್ ಸಾಗರ್ ನಾನ್‍ಫಿಕ್ಷನ್ ಕಾರ್ಯಗಳ ಕುರಿತು ಮತ್ತು ಅಲ್ಲಿನ ಸವಾಲುಗಳ ಬಗ್ಗೆ ವಿವರಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ್ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು. ಮೋಕ್ಷಾ ರೈ ನಿರೂಪಿಸಿದರು. ಅನುವಿತ್ ಸ್ವಾಗತಿಸಿದರು.

Related posts

Leave a Reply

Your email address will not be published. Required fields are marked *