Header Ads
Header Ads
Breaking News

ಉಜಿರೆ : ಎಸ್.ಡಿ.ಎಂ ಎನ್‌ಎಸ್‌ಎಸ್ ಘಟಕದ ವತಿಯಿಂದ ನಡೆದ ಪರಿಸರ ಮೈತ್ರಿ ಕಾರ್ಯಕ್ರಮ

ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸದಾಶಯದೊಂದಿಗೆ ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್. ಘಟಕವು ’ಪರಿಸರ ಮೈತ್ರಿ’ ಎಂಬ ವಿನೂತನ ಆಂದೋಲನ ರೂಪಿಸಿದೆ.ಹಲಸು ಮತ್ತು ಮಾವಿನ ಬೀಜಗಳನ್ನು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿ ಆ ಮೂಲಕ ಪರಿಸರದ ಮಹತ್ವ ಸಾರುವ ಉದ್ದೇಶ ಈ ಕಾರ್ಯಕ್ರಮದ್ದು. ಶುಕ್ರವಾರ ಈ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರಕಿತು. ಎನ್. ಎಸ್. ಎಸ್ ಘಟಕದ 200 ಸ್ವಯಂಸೇವಕರು ಒಂದು ಸಾವಿರ ಹಲಸು, ಮಾವಿನ ಬೀಜಗಳನ್ನು ಎಸ್.ಡಿ.ಎಂ.ನ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಿತರಿಸಿದರು. ಜೊತೆಗೆ ಗ್ರೋತ್ ಚಾರ್ಟ್ ಕೊಟ್ಟಿದ್ದು, ಪ್ರತಿ ತಿಂಗಳು ಬೀಜದ ಬೆಳವಣಿಗೆಯ ಕುರಿತು ವರದಿ ಬರೆಯುವಂತೆ ಸೂಚನೆ ನೀಡಲಾಗಿದೆ.

’ಪರಿಸರ ಮೈತ್ರಿ’ ಎಂಬ ಹೆಸರಿನ ಈ ಪರಿಕಲ್ಪನೆ ಎಸ್. ಡಿ. ಎಂ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರದ್ದು. ವಿದ್ಯಾರ್ಥಿಗಳಿಗೆ ಪರಿಸರದ ಮೇಲೆ ಪ್ರೀತಿ ಹುಟ್ಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಹೆಜ್ಜೆ.ಎನ್. ಎಸ್. ಎಸ್ ವಿದ್ಯಾರ್ಥಿಗಳು ಈ ಹಿಂದೆ ಬೀಜದ ಉಂಡೆ ಮಾಡಿ, ಕಾಲಿ ಜಾಗದಲ್ಲಿ ಹಾಗೂ ಶಾಲೆಯ ವಠಾರದಲ್ಲಿ ನೆಟ್ಟಿದ್ದರು. ’ನನ್ನೆರಡು ಗಿಡಗಳು ನಾಳಿನ ನನಗಾಗಿ’ ಎಂಬ ಪರಿಕಲ್ಪನೆಯಲ್ಲಿ ಪ್ರತಿಯೊಬ್ಬ ಸ್ವಯಂ ಸೇವಕ ಈ ವರ್ಷದಲ್ಲಿ 2 ಗಿಡ ನೆಡಬೇಕು, ಈ ಒಂದು ಯೋಜನೆಯಲ್ಲಿ ಸ್ವಯಂ ಸೇವಕ ಒಂದೊಂದರಂತೆ ಕಕ್ಕಿಂಜೆಯ ಶಾಲೆಯಲ್ಲಿ 200 ಗಿಡಗಳನ್ನು ನೆಟ್ಟು, ಇನ್ನೊಂದು ಗಿಡವನ್ನು ತಮ್ಮ ತಮ್ಮ ಮನೆಯಲ್ಲಿ ನೆಟ್ಟಿದ್ದರು.

ಈ ಕಾರ್ಯಕ್ರಮವನ್ನು ಎನ್. ಎಸ್. ಎಸ್.ನ ಸಂಯೋಜನಾಧಿಕಾರಿ ಡಾ. ಲಕ್ಮೀ ನಾರಾಯಣ, ಕಂಪ್ಯೂಟರ್ ಸೈನ್ಸ್ ವಿಭಾಗದ ಆಶಾಕಿರಣ ವಹಿಸಿಕೊಂಡಿದ್ದರು.

ವರದಿ : ಗಾಯತ್ರಿ ಗೌಡ

Related posts

Leave a Reply

Your email address will not be published. Required fields are marked *