Header Ads
Breaking News

ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ತೆರಿಗೆ ಸಲಹಾ ಕೇಂದ್ರ ಉದ್ಘಾಟನೆ

ಉಜಿರೆ: ಇಲ್ಲಿನ ಶ್ರೀ ಧ.ಮಂ. ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಕರದಾತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ತೆರಿಗೆ ಸಲಹಾ ಕೇಂದ್ರ ಉದ್ಘಾಟನೆಗೊಂಡಿತು.ಬೆಳ್ತಂಗಡಿ ತಾಲೂಕಿನ ವಾಣಿಜ್ಯ ತೆರಿಗೆ ಪರಿವೀಕ್ಷಕಿ ಅರುಂಧತಿ ಎಂ. ತೆರಿಗೆ ಸಲಹಾ ಕೇಂದ್ರವನ್ನು ಉದ್ಘಾಟಿಸಿ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ನಮ್ಮ ಕಾಲೇಜಿನ ಶಿಕ್ಷಕರು ಬೋಧನಾ ವಿಷಯಗಳ ಜೊತೆಗೆ ವಿಶೇಷವಾದ ಕೌಶಲ್ಯಗಳನ್ನು ಹೊಂದಿದ್ದಾರೆ. ಅದು ಇಲ್ಲಿನ ಜನತೆಗೂ ಉಪಕಾರಿಯಾಗಬೇಕು ಎಂಬ ನಿಟ್ಟಿನಲ್ಲಿ ತೆರಿಗೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ವಿಶೇಷ ಪರಿಣಿತಿ ಹೊಂದಿರುವವರನ್ನು ಇದಕ್ಕೆ ನಿಯೋಜಿಸಲಾಗಿದೆ. ಈ ಕೇಂದ್ರ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಸೇವೆ ಮತ್ತು ಮಾಹಿತಿ ನೀಡಲು ಸದಾ ಸಿದ್ಧವಾಗಿರುತ್ತದೆ ಎಂದು ನುಡಿದರು. ತೆರಿಗೆ ಸಲಹಾ ಕೇಂದ್ರದ ಸಂಯೋಜಕ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಭಾನುಪ್ರಕಾಶ್ ಮಾತನಾಡಿ, ವಾಣಿಜ್ಯ ವಿಭಾಗಕ್ಕೆ ಹೊಂದಿಕೊಂಡಿರುವ ಈ ತೆರಿಗೆ ಕೇಂದ್ರಕ್ಕೆ ಸಾರ್ವಜನಿಕರೂ ಆಗಮಿಸಿ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಹಾಗೂ ಇದರ ಬಗ್ಗೆ ಸಮಾಲೋಚನೆ ನಡೆಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜನಾಧಿಕಾರಿ ಡಾ. ಶಂಕರನಾರಾಯಣ್, ಕಛೇರಿ ಅಧೀಕ್ಷಕ ಯುವರಾಜ್ ಪೂವಣಿ, ಬಿ.ಬಿ.ಎ. ಮುಖ್ಯಸ್ಥ ಅಜಯ್ ಕೊಂಬ್ರಬೈಲ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಎನ್. ಕಾಕತ್ಕರ್, ಹಾಗೂ ಕಾಲೇಜಿನ ವಾಣಿಜ್ಯ ಮತ್ತು ಬಿ.ಬಿ.ಎ. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *