Header Ads
Header Ads
Breaking News

ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಎನ್.ಸಿ.ಸಿ ಡೇ ಪ್ರಯುಕ್ತ ಕೆಡೆಟ್‍ಗಳಿಂದ ಪಥಸಂಚಲನ

ವಿದ್ಯಾರ್ಥಿಗಳು ಎನ್.ಸಿ.ಸಿಯಲ್ಲಿ ಭಾಗವಹಿಸುವುದು ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕ ಎಂದು ಮಾಜಿ ಎನ್.ಸಿ.ಸಿ ಭೂದಳ ಮುಖ್ಯಸ್ಥ ಕ್ಯಾ| ಜಿ. ಆರ್. ಭಟ್ ತಿಳಿಸಿದರು.ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಎನ್.ಸಿ.ಸಿ ವಿಭಾಗದಿಂದ ಹಮ್ಮಿಕೊಂಡಿದ್ದ ಎನ್.ಸಿ.ಸಿ ಡೇ ಕಾರ್ಯಕ್ರಮದಲ್ಲಿ ಕೆಡೆಟ್‍ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

71 ನೇ ಎನ್.ಸಿ.ಸಿ ದಿನದ ಅಂಗವಾಗಿ ಎಸ್.ಡಿ.ಎಂ ಪದವಿ ಕಾಲೇಜು ಮತ್ತು ಎಸ್.ಡಿ.ಎಂ ಪ್ರೌಢಶಾಲೆಯ ಕೆಡೆಟ್‍ಗಳ ಸಹಭಾಗಿತ್ವದಲ್ಲಿ 150 ಕ್ಕೂ ಅಧಿಕ ಕೆಡೆಟ್‍ಗಳು ಕಾಲೇಜಿನಿಂದ ಪ್ರಾರಂಭಿಸಿ ಉಜಿರೆಯ ದ್ವಾರದವರೆಗೆ ಶಿಸ್ತುಬದ್ಧ ಪಥಸಂಚಲನ ಮಾಡಿದರು.ಸ್ವಚ್ಛತೆ ಮತ್ತು ಜಲಸಂರಕ್ಷಣೆ ಇತ್ಯಾದಿ ಸಾಮಾಜಿಕ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪಥಸಂಚಲನ ಮಾಡಿದರು.ಕಾಲೇಜಿನ ಎನ್.ಸಿ.ಸಿ ವಿಭಾಗದ ಮುಖ್ಯಸ್ಥರುಗಳಾದ ಲೆ| ಕ| ಡಾ. ಶ್ರೀಧರ್ ಭಟ್, ಲೆ| ಭಾನುಪ್ರಕಾಶ್ ಹಾಗೂ ಹೈಸ್ಕೂಲ್ ಎನ್.ಸಿ.ಸಿ ವಿಭಾಗದ ಮುಖ್ಯಸ್ಥರುಗಳಾದ ಚೀಫ್ ಆಫಿಸರ್ ರಮೇಶ್ ಮಯ್ಯ ಹಾಗೂ ಚೀಫ್ ಆಫಿಸರ್ ಪದ್ಮರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆಡೆಟ್ ಜಶ್ಮೀ ಸ್ವಾಗತಿಸಿ ಕೆಡೆಟ್ ದಾದಾಫೀರ್ ನಿರೂಪಿಸಿ ಲೀಡಿಂಗ್ ಕೆಡೆಟ್ ರೇಷ್ಮಾ ವಂದಿಸಿದರು.

Related posts

Leave a Reply

Your email address will not be published. Required fields are marked *