Header Ads
Breaking News

ಉಜಿರೆ ಕಾಲೇಜಿನಲ್ಲಿ ಮಿಂಚಿನ ನೊಂದಣಿ ಪ್ರಕ್ರಿಯೆ

 ದೇಶದಯುವಶಕ್ತಿಯಾಗಿರುವ ವಿದ್ಯಾರ್ಥಿಗಳು ಅಗತ್ಯವಾಗಿ ಮತದಾರರ ಪಟ್ಟಿಗೆತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ತನ್ಮೂಲಕದೇಶದಅಭಿವೃದ್ಧಿಗೆ ಸಹಕರಿಸಬೇಕುಎಂದು ಪುತ್ತೂರು ವಿಭಾಗದ ಸಹಾಯಕಆಯುಕ್ತ ಹಾಗೂ ಮುಖ್ಯಚುನಾವಣಾಧಿಕಾರಿಯತೀಶ್ ಉಲ್ಲಾಳ ತಿಳಿಸಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳ್ನು ಉದ್ದೇಶಸಿ ಅವರು ಮಾತನಾಡಿದರು. ರಾಜ್ಯಚುನಾವಣಾಆಯೋಗ ೧೮ ವರ್ಷದ ಮೇಲ್ಪಟ್ಟಯುವ ಮತದಾರರನ್ನು ಮಾತದಾರರ ಪಟ್ಟಿಗೆ ಸೇರಿಸುವ ಸಲುವಾಗಿ ಮಿಂಚಿನ ನೊಂದಣಿ ಎಂಬ ಯೋಜನೆಯನ್ನುಜನವರಿಒಂದನೇತಾರೀಕನಿಂದ ಚಾಲ್ತಿಗೆ ತಂದಿದೆ. ಈ ಯೋಜನೆಯ ಅಂಗವಾಗಿ ಶ್ರೀ.ಧ.ಮಂಕಾಲೇಜಿನ ಸುಮಾರು ೮೦ ವಿದ್ಯಾಥಿಗಳಿಗೆ ಮೊದಲ ಹಂತದಲ್ಲಿಅರ್ಜಿಯನ್ನು ವಿತರಿಸಲಾಯತು.

ಈ ಸಂದಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದಚುನಾವಣಾಧಿಕಾರಿ ಹಾಗೂ ಪುತ್ತೂರು ವಿಭಾಗದ ಸಹಾಯಕಆಯುಕ್ತರಾದಯತೀಶ್ ಉಲ್ಲಾಳಿನೇನು ಕೆಲವೇ ದಿನಗಳಲ್ಲಿ ಗಣರಾಜ್ಯೋತ್ಸವ ಸಮೀಪಿಸುತ್ತಿದ್ದು ಪ್ರಜಾಪ್ರಭುತ್ವರಾಷ್ಟ್ರದ ಪ್ರಬುದ್ಧ ನಾಗರೀಕರಾದ ನಾವು ಶೀಘ್ರವಾಗಿ ಮತಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳೋಣ ಹಾಗೂ ಇತರರನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸೋಣಎಂದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲ್ಲೂಕು ತಾಶೀಲ್ದಾರರಾದ ಗಣಪತಿಶಾಸ್ತ್ರಿ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್‌ಚಂದ್ರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *