Header Ads
Header Ads
Breaking News

ಉಜಿರೆ: ಮಿಲನ್ ಪದಾಧಿಕಾರಿಗಳ ರಾಜ್ಯ ಮಟ್ಟದ ಕಾರ್ಯಗಾರ

ಭಾರತೀಯ ಜೈನ್ ಮಿಲನ್‌ನ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯು ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ವೀರ್ ಡಿ.ಸುರೇಂದ್ರ ಕುಮಾರ್, ಧರ್ಮಸ್ಥಳ ರವರ ಉಪಸ್ಥಿತಿಯಲ್ಲಿ, ವಲಯಾಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್‌ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜರಗಿತು. ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್‌ರವರ ನೇತೃತ್ವದಲ್ಲಿ ಮಂಗಳೂರು ವಿಭಾಗದ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು. ಸಭೆಯ ಪ್ರಾರಂಭದಲ್ಲಿ ಜೈನ್ ಮಿಲನ್‌ನ ಮುಂದಿರುವ ಯೋಜನೆಗಳ ಬಗ್ಗೆ ರಾಷ್ಟ್ರೀಯ ಕಾರ್ಯಾಧ್ಯಕ್ಷರು ವಿವರಿಸುತ್ತಾ ಪ್ರತೀ ತಾಲೂಕು ಕೇಂದ್ರಗಳಲ್ಲಿ ಮಿಲನ್ ಶಾಖೆಗಳನ್ನು ತೆರೆದು ಸಂಘಟನೆಯನ್ನು ಬಲಪಡಿಸುವ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ರಾಜ್ಯ ಮಟ್ಟದಲ್ಲಿ ಜರಗುವ ಭಜನಾ ಸ್ಪರ್ಧೆಯ ಆಶಯ ಹಾಗೂ ರೂಪು ರೇಷೆಗಳ ಬಗ್ಗೆ ಸವಿವರವಾಗಿ ಸಂಘಟನೆಯ ಮಹಿಳಾ ವಿಭಾಗದ ಅಧ್ಯಕ್ಷೆ ವೀರಾಂಗನಾ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು. ಉಪಾಧ್ಯಕ್ಷರೂ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳೂ ಆದ ಡಾ|ಬಿ.ಯಶೋವರ್ಮರು ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಮಾರ್ಗದರ್ಶಿ ಮಾತುಗಳನ್ನಾಡಿದರು. ವಲಯಾಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್‌ರವರು ಎಲ್ಲಾ ವಿಭಾಗದ ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಚಟುವಟಿಕೆಗಳ ವಿವರವಾದ ವರದಿಯನ್ನು ದಾಖಲೆ ಸಮೇತ ಪರಿಶೀಲಿಸಿ, ಮಾರ್ಗದರ್ಶನ ನೀಡಿದರು. ವಲಯದ ಪ್ರಧಾನ ಕಾರ್ಯದರ್ಶಿ ವೀರ್ ಯಂ. ರಾಜೇಶ್ ಸ್ವಾಗತಿಸಿದರು. ವೀರ್ ಪ್ರಮೋದ್ ಕುಮಾರ್ ಮಂಗಳೂರು ಲೆಕ್ಕಪತ್ರಗಳನ್ನು ಮಂಡಿಸಿದರು. ವೀರ್ ಸಚಿನ್ ಕುಮಾರ್ ಹಾಗೂ ವೀರ್ ಅರಿಂಜಯರವರು ಮಾಸಿಕ ವರದಿಗಳ ಬಗ್ಗೆ ವಿವರಣೆ ನೀಡಿದರು. ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್ ಹಾಗೂ ಕಾರ್ಯದರ್ಶಿ ವೀರ್ ಶುಭಾಶ್ವಂದ್ರರವರು ಮಂಗಳೂರು ವಿಭಾಗದ ಕಾರ್ಯಕ್ರಮಗಳ ಸಮಗ್ರ ವರದಿಯನ್ನು ನೀಡಿದರು. ನಿರ್ದೇಶಕರಾದ ವೀರ್ ಧನ್ಯಕುಮಾರ್ ರೈ ಉಪ್ಪಿನಂಗಡಿ, ವೀರ್ ಅಂಡಾರ್ ಮಹಾವೀರ್ ಜೈನ್, ವೀರ್ ಬಿ.ಸೋಮಶೇಖರ ಶೆಟ್ಟಿ ಉಜಿರೆ, ವೀರ್ ರಾಜವರ್ಮ ಆರಿಗ ಉಡುಪಿ, ವೀರ್ ಜಯರಾಜ ಕಂಬಳಿ ಮೂಡಬಿದಿರೆ, ವೀರ್ ಬಿ.ಪ್ರಮೋದ್ ಕುಮಾರ್ ವೇಣೂರು, ಮಿಲನ್‌ನ ರಾಷ್ಟ್ರೀಯ ಪದಾಧಿಕಾರಿಗಳಾದ ವೀರಾಂಗನಾ ರಾಜಶ್ರೀ ಎಸ್.ಹೆಗ್ಡೆ, ವೀರ್ ಸುದರ್ಶನ್ ಜೈನ್ ಕಣಿಯೂರು ಉಪಸ್ಥಿತರಿದ್ದು ತಮ್ಮ ಕಾರ್ಯವ್ಯಾಪ್ತಿಯ ಮಿಲನ್‌ಗಳ ಚಟುವಟಿಕೆಗಳಾದ ಸಸಿ ನೆಡುವಿಕೆ, ಶುದ್ಧ ಕುಡಿಯುವ ನೀರಿನ ಘಟಕಗಳ ಕೊಡುಗೆ, ಆಹಾರ ಮೇಳ, ವಿದ್ಯಾರ್ಥಿ ವೇತನ, ಸಾರ್ಥಕರ ಸನ್ಮಾನ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಯುವಕರಿಗೆ ನಡೆಯಲಿರುವ ವಿಶೇಷ ಕಾರ್ಯಾಗಾರ, ಧಾರ್ಮಿಕ ತರಗತಿಗಳಿಗೆ, ನೆರೆ ಸಂತ್ರಸ್ತರಿಗೆ ಸಹಾಯ ಇತ್ಯಾದಿ ವಿಚಾರಗಳ ಬಗ್ಗೆ ವಿವರವಾದ ವರದಿಯನ್ನು ನೀಡಿದರು. ಈ ಸಂದರ್ಭದಲ್ಲಿ ವೀರ್ ಡಿ.ಸುರೇಂದ್ರ ಕುಮಾರ್ ಧರ್ಮಸ್ಥಳರವರು ಮಿಲನ್ ಕೈ ಪಿಡಿಯನ್ನು ಅನಾವರಣಗೊಳಿಸಿದರು. ಕೊನೆಯಲ್ಲಿ ವೀರ್ ಧನ್ಯಕುಮಾರ್ ಉಪ್ಪಿನಂಗಡಿ ವಂದಿಸಿದರು.

Related posts

Leave a Reply

Your email address will not be published. Required fields are marked *