Header Ads
Header Ads
Breaking News

ಉಡುಪಿ:ಕಾಣಿಯೂರು ಮಠದ ಶ್ರೀಗಳಿಂದ”ಸುಜ್ಞಾನ” ಮಕ್ಕಳ ಕಥಾ ಸಂಕಲನ ಬಿಡುಗಡೆ

ಸುಜ್ಞಾನ’ ಮಕ್ಕಳ ಕಥಾ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮವು ಉಡುಪಿಯಲ್ಲಿ ನಡೆಯಿತು. ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಬರೆದಿರುವ ಕೃತಿಯಾಗಿದ್ದು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಕೃತಿಯನ್ನು ಬಿಡುಗಡೆಗೊಳಿಸಿದರು.

ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ಉಡುಪಿ ಕಾಣಿಯೂರು ಮಠದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀವಿದ್ಯಾವಲ್ಲಭ ತೀರ್ಥರು ಪುಸ್ತಕ ಬಿಡುಗಡೆಗೊಳಿಸಿ ಹರಸುತ್ತಾ, ತಾರಾನಾಥ್ ಮೇಸ್ತ ಶಿರೂರು ಅವರು, ಮಕ್ಕಳಿಗಾಗಿ ಬರೆದ ಒಳ್ಳೆಯ ಪುಸ್ತಕ ’ಸುಜ್ಞಾನ’. ಈ ಸಣ್ಣ ಸಣ್ಣ ಕತೆಗಳ ಸಂಕಲನವು, ಮಕ್ಕಳಲ್ಲಿ ಒಳ್ಳೆಯ ಆದರ್ಶ, ವ್ಯಕ್ತಿತ್ವ, ಚಿಂತನೆ ಮತ್ತು ಒಳ್ಳೆಯ ಬುದ್ದಿಯನ್ನು ನೀಡಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸಬಲ್ಲ ದೃಷ್ಟಾಂತದಿಂದ ತುಂಬಿದೆ ಎಂದರು.ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಹಿರಿಯ ಸಂಶೋಧಕ ಹೆರೆಂಜೆ ಕೃಷ್ಣ ಭಟ್, ಸಾಹಿತಿ ಹರಿಕೃಷ್ಣ ರಾವ್ ಸಗ್ರಿ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್ ಕಿದಿಯೂರ್, ಶ್ರೀನಿವಾಸ ಸರಳಾಯ ಹಾಗೂ ಐಸಿರಿ ಸುರೇಂದ್ರ ಕುಕ್ಯಾನ್ ಉಪಸ್ಥಿತರಿದ್ದರು.

Related posts

Leave a Reply