Header Ads
Header Ads
Breaking News

ಉಡುಪಿ:ಗಾಯಗೊಂಡ ಕಡಲಾಮೆ ರಕ್ಷಣೆ. ಕೋಟ ಕಡಲ ಕಿನಾರೆಯಲ್ಲಿ ಕಂಡು ಬಂದ ಆಮೆ. ಸ್ಥಳೀಯರ ಸಹಾಯದಿಂದ ರಕ್ಷಣೆ.

 

ಉಡುಪಿ ಜಿಲ್ಲೆಯ ಕೋಟ ಪಡುಕೆರೆ ಕಡಲ ಕಿನಾರೆಯಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲು ವ್ಯವಸ್ಥೆಗೊಳಿಸಿ ಮಾನವೀಯ ಕಾರ್ಯವನ್ನು ಮಾಡಿದ್ದಾರೆ. ಮೀನುಗಾರ ಪ್ರದೀಪ್ ಅವರು, ಕಡಲಂಚಿನಲ್ಲಿ ಬಲೆಹಾಕಿ ಮಿನು ಹಿಡಿಯುವ ಸಂದರ್ಭ ಗಾಯಗೊಂಡಿರುವ ಕಡಲಾಮೆಯನ್ನು ಕಂಡಿದ್ದಾರೆ. ಆ ಕೂಡಲೇ ಅವರು ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಪೌಂಡೇಶನ್ ಇದರ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತ ವಿನಯಚಂದ್ರರಿಗೆ ಮಾಹಿತಿ ನೀಡಿ, ಅವರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿಗೆ ಸ್ಪಂದಿಸಿದ ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಸಿಬಂದಿಗಲಾದ ಶಿವಪ್ಪ ನಾಯ್ಕ , ಪರಶುರಾಮ್ ಮೇಟಿ , ಜೋಯ್ ಮುಂತಾದವರು ಆಗಮಿಸಿ ರಕ್ಷಣಾ ಕಾರ್ಯಚರಣೆ ನೆಡೆಸಿದ್ದಾರೆ. ಆ ಬಳಿಕ ಆಮೆಯನ್ನು ಕಡಲಲ್ಲಿ ತೆರೆಗಳ ಅಬ್ಬರ ಹೆಚ್ಚಾದರಿಂದ, ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಬಿಟ್ಟಿದ್ದಾರೆ.

Related posts

Leave a Reply