Header Ads
Header Ads
Breaking News

ಉಡುಪಿ:ಗುರುತು ಹಿಡಿಯಲಾರದಷ್ಟು ಕೊಳೆತ ಸ್ಥಿತಿಯಲ್ಲಿದ್ದ ಶವ

ನಿಟ್ಟೂರು ಶನೀಶ್ವರ ದೇವಸ್ಥಾನ ಸಮೀಪದ ಜೋಪಡಿಯಲ್ಲಿ ವಾಸವಾಗಿದ್ದ ಲಕ್ಷ್ಮವ್ವ ಅವರು ಅಕ್ಟೋಬರ್ 24ರಿಂದ ನಾಪತ್ತೆಯಾಗಿದ್ದ ಬಗ್ಗೆ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ಲಕ್ಷ್ಮವ್ವ ಅವರ ಶವವು ಗುರುತು ಹಿಡಿಯಲಾರದಷ್ಟು ಕೊಳೆತ ಸ್ಥಿತಿಯಲ್ಲಿ ಉಡುಪಿ ಸಿಟಿ ಆಸ್ಪತ್ರೆ ಸನಿಹದ ಖಾಸಗಿಯವರ ಗಿಡಗಂಟಿ ಬೆಳೆದ ಸ್ಥಳದಲ್ಲಿ ಕಂಡು ಬಂದಿದೆ.

ಸ್ಥಳದಲ್ಲಿದ್ದ ಚಪ್ಪಲಿ, ಧರಿಸಿದ ಬಟ್ಟೆಯ ಆಧಾರದ ಮೂಲಕ ಸಂಬಂಧಿಕರು ಮೃತ ಮಹಿಳೆಯ ಗುರುತು ಪತ್ತೆ ಹಚ್ಚಿದ್ದಾರೆ. ಸಾವಿನ ನಿಖರ ಕಾರಣವು ಪೊಲೀಸ್ ತನಿಖೆ, ವೈದ್ಯಕೀಯ ಪರೀಕ್ಷೆಗಳಿಂದ ತಿಳಿದು ಬರಬೇಕಿದೆ. ತನಿಖೆ ಪ್ರಗತಿಯಲ್ಲಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಳೆತ ಕಳೇಬರವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು ನಗರ ಠಾಣೆಗೆ ಉಚಿತ ಅಂಬುಲೇನ್ಸ್ ಸೇವೆ ನೀಡಿ ಸಹಕರಿಸಿದ್ದಾರೆ

Related posts

Leave a Reply