Header Ads
Breaking News

ಉಡುಪಿಗೆ ಭೇಟಿ ಕೊಟ್ಟ ನಿರ್ಮಲಾ ಸೀತಾರಾಮನ್: ಪಲಿಮಾರು ಶ್ರೀಗಳು ಮಾಡಿಕೊಂಡ ಮನವಿ ಏನು ಗೊತ್ತೇ?

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪರ್ಯಾಯ ಪಲಿಮಾರು ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭ ಮಾತನಾಡಿದ ಅವರು, ಶ್ರೀಗಳಲ್ಲಿ ನನ್ನ ವಿನಂತಿಯಿದೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಹಾಗಾಗಿ ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ದೇಶ ಸುರಕ್ಷಿತರ ಕೈಯ್ಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಿ. ಮತ್ತೆ ಬಿಜೆಪಿ ಸರಕಾರ ರಚನೆಯಾಗುವಂತೆ ಆಶೀರ್ವದಿಸಿ ಎಂದು ನಿರ್ಮಲಾ ಸೀತಾರಾಮ್ ವಿನಂತಿಸಿಕೊಂಡ್ರು.
ಇದಕ್ಕೆ ಉತ್ತರಿಸಿದ ಪಲಿಮಾರು ಶ್ರೀಗಳು, ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಉಡುಪಿಗೆ ಕಳುಹಿಸಿಕೊಡಿ. ಅಭಿನಂದನ್ ಪರಾಕ್ರಮ ನಮಗೆ ಬಹಳ ಮೆಚ್ಚುಗೆಯಾಗಿದೆ. ಕೃಷ್ಣಮಠದಲ್ಲಿ ಅಭಿನಂದನ್‌ಗೆ ಗೌರವಾರ್ಪಣೆ ಮಾಡಬೇಕು. ಇಲಾಖೆ ಮೂಲಕ ಅವರು ಬರುವಂತೆ ಅವಕಾಶ ಕೊಡಿ. ರಕ್ಷಣಾ ಸಚಿವೆ ಬಳಿ ಪಲಿಮಾರುಶ್ರೀ ಬೇಡಿಕೆ ನೀಡಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾನೂನಾತ್ಮಕ ಅಡೆ ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಒಂದು ಪತ್ರ ಬರೆಯಿರಿ ಎಂದು ಹೇಳಿದ್ರು.

Related posts

Leave a Reply

Your email address will not be published. Required fields are marked *