Header Ads
Header Ads
Breaking News

ಉಡುಪಿ:ಮಂಡ್ಯದಲ್ಲಿ ಬಸ್ ಅಪಘಾತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

ಮಂಡ್ಯದ ಪಾಂಡವಪುರದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ ವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಮಾರುತಿ ವೀಥಿಕದ ಸಮಿತಿಯ ಕಚೇರಿಯ ಮುಂಭಾಗದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷರಾದ ಎಂ ಶ್ರೀ ನಾಗೇಶ್ ಹೆಗಡೆ ಹಾಗೂ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸೇರಿದಂತೆ ನೆರೆದವರು ಕ್ಯಾಂಡಲ್ ಉರಿಸಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ ಶ್ರೀ ನಾಗೇಶ್ ಹೆಗಡೆ ಪಾಂಡವ ಪುರದಲ್ಲಿ ನಡೆದ ಘಟನೆಯಲ್ಲಿ ಒಂಬತ್ತು ಮಕ್ಕಳು 15ಮಹಿಳೆಯರು ಹಾಗೂ ಆರು ಮಂದಿ ಪುರುಷರು ಸೇರಿದಂತೆ ಒಟ್ಟು 30 ಮಂದಿ ಮೃತಪಟ್ಟಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದೇವರು ಶಕ್ತಿಯನ್ನು ತುಂಬಲಿ ಅಂತ ಶ್ರದ್ಧಾಂಜಲಿ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪರಿಸರವಾದಿ ವಿನಯಚಂದ್ರ,ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ, ಉದಯ್ ಕುಮಾರ್, ಸುಧಾಕರ್ ಶೆಟ್ಟಿ, ಸುನಿಲ್ ಶೇಠ್, ಮಾಸ್ಟರ್ ಇಕ್ಷಾನ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply