Breaking News

ಉಡುಪಿಯಲ್ಲಿ ಅಂತರ ಜಿಲ್ಲಾ ಚೆಸ್ ಪಂದ್ಯಾಟ, ಬುದ್ಧಿಗೆ ಪೂರಕ ಚೆಸ್-ಸಚಿವ ಪ್ರಮೋದ್ ಮಧ್ವರಾಜ್

ಮಕ್ಕಳ ಜ್ಞಾನದ ಮಟ್ಟ ವೃದ್ಧಿಗೆ ಚೆಸ್ ಆಟ ಸಹಕಾರಿಯಾಗಿದೆ ಎಂದು ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘದ ಉಡುಪಿ ವಲಯ ಹಾಗೂ ಜಿಲ್ಲಾ ಚೆಸ್ ಅಸೋಸಿಯೇಶನ್ನ ಸಂಯುಕ್ತ ಆಶ್ರಯದಲ್ಲಿ ಆದಿ‌ಉಡುಪಿಯ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತರ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚೆಸ್ ಆಡುವುದರಿಂದ ಮಕ್ಕಳ ಬುದ್ಧಿಮಟ್ಟ ಸುಧಾರಣೆಯಾಗುವುದರ ಜತೆಗೆ ಅವರು ಕಲಿಕೆಯಲ್ಲೂ ಪ್ರಾವೀಣ್ಯತೆ ಸಾಧಿಸಲು ಅನುಕೂಲವಾಗುತ್ತದೆ. ಹಾಗೆಯೇ ಚದುರಂಗ ಆಟಗಾರರಿಗೆ ಸಮಾಜದಲ್ಲೂ ವಿಶೇಷ ಸ್ಥಾನಮಾನ, ಗೌರವಗಳು ಲಭಿಸುತ್ತವೆ ಎಂದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡೆರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತ ನಾಡಿ, ಮಕ್ಕಳ ಸರ್ವಾಂಗೀಣ ಬೆಳವ ಣಿಗೆಗೆ ಚೆಸ್ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ರಾಜ್ಗೋಪಾಲ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರ ಸಭಾ ಸದಸ್ಯ ಹರೀಶ್ರಾಮ್ ಬನ್ನಂಜೆ, ಡೆರಿಕ್ ಚೆಸ್ ಸ್ಕೂಲ್ನ ಸಂಚಾಲಕ ಪ್ರಸನ್ನ ರಾವ್, ಆದಿ‌ಉಡುಪಿ ಪ್ರೌಢ ಶಾಲೆಯ ಕಾರ್ಯದರ್ಶಿ ಟಿ. ಕೆ. ಗಣೇಶ್ ರಾವ್, ಮುಖ್ಯೋಪಾಧ್ಯಾಯ ರಾಮ ದಾಸ್ ಭಟ್, ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷ ಕೆ. ಪ್ರಭಾಕರ್ ಉಪಸ್ಥಿತರಿದ್ದರು.

Related posts

Leave a Reply