Header Ads
Header Ads
Breaking News

ಉಡುಪಿಯಲ್ಲಿ ಅಕ್ರಮ ಗೋಸಾಗಾಟ : ಅಕ್ರಮಕ್ಕೆ ಪೊಲೀಸರೇ ಕಿಂಗ್ ಪಿನ್‌ಗಳು

ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ಗೋ ಸಾಗಾಟದ ಪ್ರಕರಣಗಳು ದಾಖಲಾಗುತ್ತಲೇ ಇದೆ. ಹಿಂದೂಪರ ಸಂಘಟನೆಗಳು ಇದರ ವಿರುದ್ದ ದ್ವನಿ ಎತ್ತುತ್ತಲೇ ಇದ್ದಾರೆ.ಆದ್ರೆ ಇಂತಹ ಘಟನೆಗಳು ಮರುಕಳಿಸಲುತ್ತಲೇ ಇದ್ದು ಇದೀಗ ಪೊಲೀಸರು ಈ ಅಕ್ರಮದಲ್ಲಿ ಭಾಗಿಯಾಗಿರೋದು ಬಯಲಿಗೆ ಬಂದಿದೆ….ಮಾತ್ರವಲ್ಲ ದೊಡ್ಡ ಮಟ್ಟದ ಅಕ್ರಮ ಬಹಿರಂಗಗೊಂಡಿದೆ.ಇದು ಬೇಲಿಯೇ ಎದ್ದು ಹೊಲ ಮೇಯಿದ ಕಥೆ. ಜಿಲ್ಲೆಯಲ್ಲಿ ಅಕ್ರಮವನ್ನು ಮಟ್ಟ ಹಾಕಬೇಕಾದ ಪೊಲೀಸರು ಅಕ್ರಮದಲ್ಲಿ ಭಾಗಿಯಾಗಿ ದುಡ್ಡಿನ ಆಸೆಗೆ ಪೊಲೀಸ್ ಇಲಾಖೆಯ ಮಾನ ಹರಾಜು ಮಾಡಿದ್ದಾರೆ.ಯಸ್… ಜೂನ್, ಜುಲೈ ತಿಂಗಳು ಬಂತೆಂದರೆ ಸಾಕು ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಲ್ಲಿ ಹಟ್ಟಿಗಳಿಂದಲೇ ದನ ಕಾಣೆಯಾಗುತ್ತೆ, ತಲವಾರು ತೋರಿಸಿ ಬೆದರಿಕೆಯೊಡ್ಡಿ ಗೋವುಗಳನ್ನು ಕದ್ದು ಸಾಗಿಸಲಾಗುತ್ತೆ. ಬೀದಿದನಗಳು ಕಣ್ಮರೆಯಾಗುತ್ತೆ. ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಅನೇಕ ಪ್ರತಿಭಟನೆಗಳೂ ನಡೆದಿವೆ. ಆದರೆ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆಯೇ ಈ ಅಕ್ರಮಕ್ಕೆ ಆಶ್ರಯ ನೀಡಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಉಡುಪಿಯಲ್ಲಿ ನಡೆದ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಶಾಮೀಲಾದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರು ಪೊಲೀಸರು ತಲೆಮರೆಸಿಕೊಂಡಿದ್ದಾರೆ. ಬಂಧಿತರಲ್ಲಿ ಒಬ್ಬ ಕರಾವಳಿ ಕಾವಲು ಪಡೆಯ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಶೆಟ್ಟಿ, ಇನ್ನೋರ್ವ ಉತ್ತರ ಕನ್ನಡ ಜಿಲ್ಲೆಯ ಮಂಕಿ ಠಾಣೆಯ ವಿನೋದ್ ಗೌಡ ಎಂದು ಗುರುತಿಸಲಾಗಿದೆ.

 ಅಕ್ರಮ ಗೋಸಾಗಾಟ ನಡೆಸುವ ಖತರ್ ನಾಕ್ ಮಾಫಿಯಾ ಗೋವಾದಿಂದ ಕಾಸರಗೋಡುವರೆಗೆ ಸಕ್ರಿಯವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಈ ಗೋಸಾಗಾಟ ನಡೆಯಬೇಕು. ಹಾಗಾಗಿ ಪೊಲೀಸ್ ಇಲಾಖೆಯ ಭೃಷ್ಟರಿಗೆ ಈ ಮಾಫಿಯಾ ಗಾಳ ಹಾಕಿದೆ. ಹಣದಾಸೆಗೆ ಬಲಿಯಾದ ಪೊಲೀಸರು ಚೆಕ್ ಪೋಸ್ಟ್ ಗಳ ಭದ್ರತಾ ವಿವರ ಹಾಗೂ ಚೆಕ್ ಪೊಸ್ಟ್ ಗಳ ಕಣ್ತಪ್ಪಿಸಿ ಸುರಕ್ಷಿತವಾಗಿ ಗೋವುಗಳನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಜುಲೈ 12ರಂದು ಉಡುಪಿಯ ಕೋಟಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆ ಪೊಲೀಸರ ಅಕ್ರಮ ಕೂಟವನ್ನು ಬಯಲು ಮಾಡಿದೆ. ಕೋಟ ಎಂಬಲ್ಲಿ ಟೋಲ್ ಗೇಟ್ ಬಳಿ ಅಕ್ರಮವಾಗಿ 13 ಕೋಣ ಹಾಗೂ 7 ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು. ವಿಷಯ ತಿಳಿದ ಕೋಟ ಎಸ್ಸೈ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ಪೊಲೀಸ್ ರಂಗಿನಾಟ ಬಯಲಾಗಿದೆ. ಪೊಲೀಸರ ಅಕ್ರಮ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

ಉಡುಪಿಯಲ್ಲಿ ಈ ಹಿಂದೆ ನಡೆದ ಅನೇಕ ಪ್ರಕರಣಗಳಲ್ಲಿ ಪೊಲೀಸರ ಪಾತ್ರ ಬಯಲಾಗಿತ್ತು.ಇದೀಗ ದೊಡ್ಡ ಮಟ್ಟದ ಅಕ್ರಮ ಬಯಲಾಗಿದೆ. ಈ ಮೂಲಕ ಪೊಲೀಸ್ ಇಲಾಖೆಯೇ ಅಕ್ರಮದ ಸೂತ್ರದಾರನಾಗಿ ಕೆಲಸ ಮಾಡುತ್ತಿರುವುದು ಬಹಿರಂಗವಾಗಿದೆ. ದೊಡ್ಡ ಮಟ್ಟದ ಅಕ್ರಮವನ್ನು ಬಹಿರಂಗ ಮಾಡಿರೋದು ಠಾಣೆಯ ಅಧಿಕಾರಿ ಹಾಗೂ ಉನ್ನತ ಅಧಿಕಾರಿಗಳು ಎನ್ನುವುದು ಮಾತ್ರ ಸದ್ಯದ ಸಮಾಧಾನದ ಸಂಗತಿ.

Related posts

Leave a Reply

Your email address will not be published. Required fields are marked *