Header Ads
Header Ads
Breaking News

ಉಡುಪಿಯಲ್ಲಿ ಅಪರಿಚಿತ ವೃದ್ಧರ ರಕ್ಷಣೆ

ಹೆರ್ಗದ ಬಸ್ಸು ನಿಲ್ದಾಣದಲ್ಲಿ ಸೊಂಟದ ಸ್ವಾದಿನ ಕಳೆದುಕೊಂಡು ನಡೆಯಲಾರದ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ದರನ್ನು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಮಾಜಿ ಸೈನಿಕರೊರ್ವರು ನೀಡಿದ ಮಾಹಿತಿ ಮೆರೆಗೆ ವೃದ್ದರನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ನಡೆದಿದ್ದು, ಆ ಬಳಿಕ ವೃದ್ದರಿಗೆ ಸೂಕ್ತ ನೆಲೆ ಕಲ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಬಸ್ಸು ನಿಲ್ದಾಣದಲ್ಲಿ ಅನ್ನ ಆಹಾರ ಇಲ್ಲದೆ ನಡೆಯಲಾಗದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಮಾಜಿ ಸೈನಿಕ ಮೋಹನ್ ಮನೋಳಿಗುಜ್ಜಿ ಅವರು ಕಾರಿನಲ್ಲಿ ಹೋಗುವಾಗ ಗಮನಿಸಿದ್ದಾರೆ. ವೃದ್ದರ ಅಸಹಾಯಕತೆಯ ಬಗ್ಗೆ ವಿಚಾರಿಸಿದ್ದಾರೆ. ನೊಂದ ಹಿರಿಯಜೀವಕ್ಕೆ ಸಾಂತ್ವಾನ ಹೇಳಿದ್ದಾರೆ. ಮಾಜಿ ಸೈನಿಕರು ನೆರವಿಗೂ ಮುಂದೆ ಬಂದಿದ್ದಾರೆ.

ಅದೇಷ್ಟೋ ದಿನಗಳಿಂದ ಮೈಗೆ ನೀರು ತಾಗಿಸಿದೆ ಶೌಚಾದಿಕ್ರೀಯೆಗಳನ್ನು ಸ್ಥಳದಲ್ಲಿಯೇ ಮಾಡಿಕೊಂಡು, ಗಬ್ಬು ವಾಸನೆ ಹೊಡೆಯುತ್ತಿದ್ದ, ವೃದ್ದರ ಬೆಳೆದು ನಿಂತು ಜಡೆಕಟ್ಟಿದ ತಲೆ ಕೂದಲು, ಗಡ್ಡಗಳ ಚೌರ ಮಾಡಿಸಿದ್ದಾರೆ. ತಂಗುದಾಣದಲ್ಲಿಯೇ ವೃದ್ದರನ್ಶು ನೀರು ತಂದು ಸ್ನಾನಮಾಡಿಸಿ ಶುಚಿಗೊಳಿಸಿದ್ದಾರೆ. ಧರಿಸಲು ಹೊಸ ಬಟ್ಟೆಯನ್ನು, ಚಳಿಯಿಂದ ರಕ್ಷಿಸಿಕೊಳ್ಳಲು ಹೊದಿಕೆಯನ್ನು ತಂದು ನೀಡಿದ್ದಾರೆ. ಪ್ರತಿ ದಿನವು ವೃದ್ದರಿಗೆ ಮೂರು ಹೊತ್ತು ಅನ್ನ ಆಹಾರ ತಾವೇ ಕಾರಿನಲ್ಲಿ ತಂದು ನೀಡಿದ್ದಾರೆ. ಹೀಗೆ ಮೋಹನ್ ಅವರ ವೃದ್ದರ ಸೇವೆಯನ್ನು ಹತ್ತು ದಿನಗಳ ವರೆಗೆ ಮಾಡಿದ್ದಾರೆ. ಅಲ್ಲದೆ ವೃದ್ದ ಶೌಚಾದಿಗಳಿಂದ ಮಲಿನಗೊಂಡ ಬಸ್ಸು ನಿಲ್ದಾಣವನ್ನೂ ನೀರು ಹಾಕಿ ಶುಚಿಗೊಳಿಸಿದ್ದಾರೆ. ಅವರಿಗೆ ವಿದೇಶದ ಪ್ರಜೆಯೊರ್ವರು ಸಹಕಾರ ನೀಡಿದ್ದಾರೆ.ಹೀಗಿರುವಾಗ ಮೋಹನ್ ಅವರಿಗೆ ಐರ್ಲೆಂಡ್ ದೇಶಕ್ಕೆ ಹೋಗ ಬೇಕಾದ ಸಮಯ ಬಂತು.

ಎಷ್ಟೋ ದಿನಗಳಿಂದ ಅವರು ವೃದ್ದರ ವಾರಸುದಾರರ ಪತ್ತೆಯಲ್ಲಿ ತೋಡಗಿದ್ದರು. ಯಾರೂ ಅವರಿಗೂ ಸಿಗಲಿಲ್ಲ. ಕೊನೆಗೆ ಅವರು ಸಮಾಜಸೇವಕ ನಿತ್ಯಾನಂದ ಅವರನ್ನು ಸಂಪರ್ಕಿಸಿ, ವೃದ್ದರ ಸ್ಥಿತಿಯ ಬಗ್ಗೆ ಹೇಳಿದರು. ಸೂಕ್ತ ನೆಲೆ ಕಲ್ಪಿಸುವಂತೆ ವಿನಂತಿಸಿದ್ದರು. ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ ವೃದ್ದರ ಸ್ಥಿತಿಯನ್ನು ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ, ಅದೇಷ್ಟೊ ಜನರು ನೋಡಿದ್ದರು. ಆದರೆ ಕಂಡರು..!ಕಾಣದಂತೆ..! ಮುಂದೆ ಸಾಗಿದ್ದಾರೆ. ದೇಶಸೇವೆಗೈದು ಇಗಷ್ಟೇ ನಿವೃತ್ತರಾಗಿರುವ ಮಾಜಿ ಸೈನಿಕ ಮೋಹನ್ ಅವರು, ಕೇವಲ ಮಾನವ ಸಂಬಂಧದ ಕಾರಣದಿಂದ ಅವರು ಮಾಡಿದ ಸೇವೆಯ ಕಣ್ಣಾರೆ ಕಂಡು ಸಾಮಾಜಿಕ ಕಾರ್ಯಕರ್ತರು ಸೆಲ್ಯೂಟ್ ಹೊಡೆದಿದ್ದಾರೆ.

ಆ ಬಳಿಕ ವೃದ್ದರನ್ನು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತರು ಸೇರಿಕೊಂಡು, ನಾಗರೀಕ ಸಮಿತಿಯ ಅಂಬುಲೇನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ವೃದ್ದರ ವಾರಸುದಾರರನ್ನು ಪತ್ತೆ ಹಚ್ಚಿ, ಅವರಲ್ಲಿ ವೃದ್ದರ ಸ್ಥಿತಿಯ ಬಗ್ಗೆ ಮನವರಿಸಿದ್ದಾರೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಹಿರಿಯ ನಾಗರಿಕ ಸಹಾಯವಾಣಿ ಸಿಬ್ಬಂದಿ ಗಣೇಶ್ ಕೊಕ್ಕರ್ಣೆ ಅವರ ಸಹಕಾರದಿಂದ ಉಪ್ಪೂರು ಕೆ.ಜಿ.ರೋಡಿನಲ್ಲಿರುವ ವೃದ್ದಾಶ್ರಮದಲ್ಲಿ ಸಂಬಂಧಿಕರ ಸೂಚನೆ ಮೆರೆಗೆ ಮತ್ತು ಉಪಸ್ಥಿತಿಯಲ್ಲಿ ವೃದ್ದರಿಗೆ ಸುವ್ಯವಸ್ಥಿತ ನೆಲೆ ಕಲ್ಪಿಸಿದ್ದಾರೆ

Related posts

Leave a Reply