Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿಯಲ್ಲಿ ಓಣಂ ಆಚರಣೆ, ಸಾಧಕರಿಗೆ ಸನ್ಮಾನ

ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ಉಡುಪಿ ವತಿಯಿಂದ 27ನೇ ವಾರ್ಷಿಕೋತ್ಸವ ಮತ್ತು ಓಣಂ ಹಬ್ಬದ ಆಚರಣೆ ಬನ್ನಂಜೆಯ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ನಡೆಯಿತು.

ಓಣಂ ಹಬ್ಬದ ಹಿನ್ನಲೆಯಲ್ಲಿ ಬೆಳಗ್ಗೆ ಪೂಕಳಂ ಸ್ಪರ್ದೆ ನಡೆಯಿತು. ವಾರ್ಷಿಕೋತ್ಸವ ಮತ್ತು ಓಣಂ ಹಬ್ಬದ ಆಚರಣೆಯನ್ನ ಬಂದರು, ಮುಜರಾಜಿ ಸಚಿವ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ದೀಪಾವಳಿಯ ಮೂಲಕ ಕರಾವಳಿಗರು ಬಲಿ ಚಕ್ರವರ್ತಿಯನ್ನ ಸ್ವಾಗತಿಸಿದರೆ ಕೇರಳಿಗರು ಹೂವುಗಳನ್ನು ಇಟ್ಟು , ವಿವಿಧ ಖಾದ್ಯ ತಯಾರಿಸಿ ಓಣಂ ಮೂಲಕ ಸ್ವಾಗತಿಸಿತ್ತಾರೆ. ದೇಶದಲ್ಲಿ ಅತೀ ಹೆಚ್ಚು ಶಿಕ್ಷಿತರು ಮತ್ತು ಪ್ರತಿಭಾವಂತರಿದ್ದರೆ ಅದು ಕೇರಳದಲ್ಲಿ . ಓಣಂ ಹಬ್ಬದ ಮೂಲಕ ಕೇರಳಿಗರು ಸಮಾಜವನ್ನು ಬೆಸೆಯುವ ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ತುಳು ಚಿತ್ರ ನಟ ಹಾಗೂ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರು ಮಾತನಾಡಿ ದೇಶದ ಯಾವುದೇ ಮೂಲೆಗೆ ಹೋದರೂ ಕೇರಳದವರು ಇದ್ದಾರೆ. ಅವರು ಯಾವ ಪ್ರದೇಶಕ್ಕೆ ಹೋದರೂ ಅವರ ಆಚರಣೆಯನ್ನು ಬಿಟ್ಟುಕೊಟ್ಟಿಲ್ಲ. ಓಣಂ ಆಚರಿಸುವ ಮೂಲಕ ತಮ್ಮ ಸಂಪ್ರದಾಯವನ್ನು ಮುಂದುವರೆಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕಾರದ ಡಾ. ಬೆಂಜಮಿನ್ ಜೋಸೆಫ್, ನಿತ್ಯಾನಂದ ಒಳಕಾಡು ಹಾಗೂ ವಿಶುಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ಗವರ್ನರ್ ವಿ.ಜಿಶೆಟ್ಟಿ, ಪದ್ಮ ವಿಭೂಷನ ಡಾ. ಎಂ.ಎಸ್ ವಲಿಯತ್ತಾನ್, ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ನ ಜಿಲ್ಲಾದ್ಯಕ್ಷ ಪಿ.ಎ ಮೋಹನ್ ದಾಸ್, ಕಾರ್ಯದರ್ಶಿ ಕೆ.ವಿ ಕುಮಾರ್, ಪ್ರಸನ್ನ ರಾಜ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply

Your email address will not be published. Required fields are marked *