Header Ads
Header Ads
Breaking News

ಉಡುಪಿಯಲ್ಲಿ ಓಸಂ ಬ್ಯೂಟಿ ಪಾರ್ಲರ್ ಉದ್ಘಾಟನೆ:ತುಳು ಚಿತ್ರನಟ ಅರ್ಜುನ್ ಕಾಪಿಕಾಡ್ ಅವರಿಂದ ಚಾಲನೆ

 ಕೃಷ್ಣನ ನಗರಿ ಉಡುಪಿಯಲ್ಲಿ ಸೌಂದರ್ಯಕ್ಕೆ ಸಂಬಂಧಪಟ್ಟ ಬ್ಯುಟಿ ಪಾರ್ಲರ್ ಆರಂಭಗೊಂಡಿದೆ. ಉಡುಪಿಯ ಕೋರ್ಟ್ ರೋಡ್ ಬಳಿಯ ಪೂಜಾ ಟವರ್ಸ್‌ನಲ್ಲಿ ಓಸಂ ಬ್ಯೂಟಿ ಪಾರ್ಲರ್ ಉದ್ಘಾಟನೆಗೊಂಡಿತು.

ತುಳು ಚಿತ್ರರಂಗದ ಹೆಸರಾಂತ ನಟ ಅರ್ಜುನ್ ಕಾಪಿಕಾಡ್ ಓಸಂ ಬ್ಯುಟಿ ಪಾರ್ಲರನ್ನು ಉದ್ಘಾಟನೆಗೊಳಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಈಗಾಗಲೇ ಮಂಗಳೂರಿನಲ್ಲಿ ಇದರ ಶಾಖೆ ಇದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಉಡುಪಿಯಲ್ಲಿನ ಬ್ಯುಟಿ ಪಾರ್ಲರ್ ಕೂಡಾ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಲಾ ರಘುಪತಿಭಟ್, ಪಾರ್ಲರ್ ನ ಮಾಲಕಿ ರಜನಿ ಬಂಗೇರ, ಚಿತ್ರನಟ ಅನೂಪ್ ಸಾಗರ್, ಚಿತ್ರನಟಿ ಆರಾದ್ಯ ಶೆಟ್ಟಿ, ಕಾವ್ಯ ಕಾಪಿಕಾಡ್,ನರಂಗ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು. ಓಸಂ ಬ್ಯುಟಿ ಪಾರ್ಲರ್ ನಲ್ಲಿ ಸ್ಟೀಮ್ ಬಾತ್, ಅಯಾಂಟಿ ಹೈರ್ ಫಾಲ್ ಬ್ರೇಕೇಜ್ ಟ್ರೀಟ್ ಮೆಂಟ್, ವೆಡ್ಡಿಂಗ್ ಪ್ಯಾಕೇಜ್, ಟ್ರೇಂಡ್ಲೀ ಹೈರ್ ಸ್ಟೈಲ್, ಹೈರ್ ಸ್ಪಾ, ಮನಿ ಕ್ಯುರ್, ಪೆಡಿ ಕ್ಯುರ್, ಸ್ಮೂಥನಿಂಗ್, ಸೇರಿದಂತೆ ಅನೇಕ ಸೇವೆಗಳು ಲಭ್ಯ ಇದೆ.

Related posts

Leave a Reply