Breaking News

ಉಡುಪಿಯಲ್ಲಿ ಕಲ್ಯಾಣ್ ಜುವೆಲ್ಲರ್ಸ್ ಮಳಿಗೆ ಶುಭಾರಂಭ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರಿಂದ ಉದ್ಘಾಟನೆ


ಉಡುಪಿಯ ಡಯನಾ ಸರ್ಕಲ್ ಬಳಿ ನೂತನ ಚಿನ್ನಾಭರಣ ಮಳಿಗೆಯಾದ ಕಲ್ಯಾಣ್ ಜುವೆಲ್ಲರ್ಸ್ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉದ್ಘಾಟಿಸಿದರು.
ಉಡುಪಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಕಲ್ಯಾಣ್ ಜುವೆಲ್ಲರ್ಸ್ ಅವರ ೧೦೭ನೇ ಮಳಿಗೆಯಾಗಿದ್ದು ಕಲ್ಯಾಣ್ ಜುವೆಲ್ಲರ್ಸ್‌ನ ರಾಯಭಾರಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಮಳಿಗೆಯನ್ನು ಉದ್ಘಾಟಿಸಿ, ಗ್ರಾಹಕರಿಗೆ ಮೊದಲ ಖರೀದಿಯ ಆಭರಣವನ್ನು ವಿತರಿಸಿದರು. ಶಿವಣ್ಣ ಆಗಮನದ ಹಿನ್ನಲೆಯಲ್ಲಿ ಸಾಕಷ್ಟು ಅಭಿಮನಿಗಳು ನೆರೆದಿದ್ದರು. ಶಿವಣ್ಣ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆಯ ಸ್ವಾಗತ ನೀಡಿದರು. ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಶಿವಣ್ಣ ಇಂದು ಕಲ್ಯಾಣ್ ಜುವೆಲ್ಲರ್ಸ್‌ನ ೫ ಮಳಿಗೆಗಳು ಉದ್ಘಾಟನೆಯಾಗುತ್ತಿದ್ದು, ಇದರಲ್ಲಿ ಉಡುಪಿಯೂ ಒಂದು. ಉಡುಪಿಗೆ ನಾನು ಶೂಟಿಂಗ್‌ಗೆ ಬರುತ್ತಾ ಇರುತ್ತೇನೆ. ಇಲ್ಲಿನ ಜನರು ಇಷ್ಟ, ಹಾಗೆಯೇ ಮೀನು ಕೂಡಾ ಇಷ್ಟ ಅಂತ ಹೇಳಿ ಕುಂದಾಪುರದ ಮೀನಮ್ಮ ಅಂತ ಹಾಡು ಹಾಡಿ ನೆರೆದವರನ್ನು ರಂಜಿಸಿದರು.
ಶಿವರಾಜ್ ಕುಮಾರ್ ಜೊತೆಗೆ ಕಲ್ಯಾಣ್ ಜುವೆಲ್ಲರ್‌ನ ಆಡಳಿತ ನಿರ್ದೇಶಕ ಟಿ. ಎಸ್. ಕಲ್ಯಾಣ್ ರಾಮನ್ ಉಪಸ್ಥಿತರಿದ್ದರು.

Related posts

Leave a Reply