Breaking News

ಉಡುಪಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಯುದ್ದದಲ್ಲಿ ಮಡಿದ ಯೋಧರಿಗೆ ನಮನ

ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಸೇನೆ ವಿಜಯಿಯಾದ ನೆನಪಿಗಾಗಿ ಕಾರ್ಗಿಲ್ ವಿಜಯ್ ದಿವಸನ್ನು ಉಡುಪಿಯಲ್ಲಿ ನಡೆಸಲಾಯಿತು. ತ್ರಿವರ್ಣ ದ್ವಜ ಹಾಗೂ ಸೇನೆಯ ದ್ವಜಾರೋಹಣ ನಡೆಯಿತು. ಉಡುಪಿಯ ಅಜ್ಜರಕಾಡು ಯುದ್ದ ಸ್ಮಾರಕದಲ್ಲಿ ಮಾಜಿ ಸೈನಿಕರು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ಕರ್ನಲ್ ರಾಮಚಂದ್ರ ರಾವ್ ಕಾರ್ಗಿಲ್ ಯುದ್ದದ ಮೆಲುಕು ಹಾಕಿದರು.

ಯುವಕರು ಸೈನೈಕ್ಕೆ ಸೇರುವ ಮೂಲಕ ದೇಶ ಸೇವೆಗೆ ಸಜ್ಜಾಗಬೇಕು ಎಂದು ಕರೆ ನೀಡಿದರು. ಮಾಜಿ ಸೈನಿಕರ ವೇದಿಕೆ, ಬಿಜೆಪಿ ಯುವ ಮೋರ್ಚಾದ ವತಿಯಿಂದ ಕಾರ್ಯಕ್ರಮ ನಡೆದಿದ್ದು ಮಾಜಿ ಸೈನಿಕರ ವೇದಿಕೆಯ ಪದಾಧಿಕಾರಿಗಳು, ಕಾಲೇಜಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಪಲ್ಲವಿ ಸಂತೋಷ್

Related posts

Leave a Reply