Header Ads
Breaking News

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಕೃಷ್ಣನಿಗೆ ಲಕ್ಷ ತುಳಸೀ ಅರ್ಚನೆ

ಪೊಡವಿಗೊಡೆಯನ ಕ್ಷೇತ್ರ ಉಡುಪಿಯಲ್ಲಿ ಈ ಬಾರಿ ಹುಲಿವೇಷ, ಮುದ್ದುಕೃಷ್ಣಗಳಿಲ್ಲದ, ಸಂಭ್ರಮದ ವಾತಾವರಣ ಮನೆ ಮಾಡದ ಜನ್ಮಾಷ್ಟಮಿ ಆಚರಣೆ.. ಕೋವಿಡ್ ಕಾರಣದಿಂದ ಸರಕಾರದ ಆದೇಶವನ್ನು ಪಾಲಿಸಿ ಸಂಪ್ರದಾಯಯಕಷ್ಟೆ  ಸೀಮಿತವಾಗಲಿರುವ ಅಷ್ಟಮಿ ಆಚರಣೆಗೆ ಮಠದಿಂದ ಸಕಲ ಸಿದ್ದತೆ ಪೂರ್ಣಗೊಂಡಿದೆ. ಪರ್ಯಾಯ ಶ್ರೀಪಾದರು ಕೃಷ್ಣನಿಗೆ ಲಕ್ಷ ತುಳಸೀ ಅರ್ಚನೆ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

 ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮೋತ್ಸವಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ಈ ಬಾರಿಯ ಉತ್ಸವ ಕಳೆದ ವರ್ಷಕ್ಕಿಂತ ತೀರಾ ಭಿನ್ನವಾಗಿರಲಿದೆ. ಭಕ್ತರ ಕೂಡುವಿಕೆಯಿಂದ ಪ್ರತೀ ವರ್ಷ ಅಷ್ಟಮಿ ವಿಜೃಂಬಣೆಯಿಂದ ನಡೆಯುತ್ತದೆ.ಆದ್ರೆ ಈ ಬಾರಿ ಕೊರೋನಾ ಕಾರಣದಿಂದ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ವಿಟ್ಲಪಿಂಡಿ ದಿವಸ ಮದ್ಯಾಹ್ನ 12.30 ರ ನಂತರ ಸಾರ್ವಜನಿಕರು ರಥಬೀದಿ ಪ್ರವೇಶಕ್ಕೆ ನನಿಷೇಧ ಧ ಹೇರಲಾಗಿದೆ. ಬರೇ ಮಠದ ಸಿಬ್ಬಂದಿಗಳು ಜನ್ಮಾಷ್ಜ್ಟಮಿಯ ಸಂಪ್ರದಾಯವನ್ನು ಪೂರೈಸಲಿದ್ದು ಕೋವಿಡ್ ನ ಎಲ್ಲಾ ನಿಯಮವನ್ನು ಮಠದವರು ಪಾಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ. ಈಗಾಗಲೇ ಸ್ವಾಮೀಜಿಯವರೊಂದಿಗೆ ಮಾತನಾಡಿದ್ದು ಅವರು ಸಹ ಒಪ್ಪಿಕೊಂಡಿದ್ದಾರೆ. ನೋರು ಜನ ಸಹ ಭಾಗವಹಿಸಲು ಅವಕಾಶ ಇಲ್ಲ. ಎರಡು ದಿನಗಳ ಕೃಷ್ಣ ಮಠದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುವುದು. ಯಾವುದೇ ವೇಷಗಳಿಗೆ ರಥಬೀದಿ ಪ್ರವೇಶ ಇಲ್ಲ. ಮಠದ ಸಿಬ್ಬಂದಿಗಳು ಮೊಸರು ಕುಡಿಯನ್ನು ಸಾಂಪ್ರದಾಯಿಕವಾಗಿ ನಿರ್ವಹಿಸುತ್ತಾರೆ ಎಂದು ಡಿಸಿ ತಿಳಿಸಿದ್ದಾರೆ.

ಸೆ.10 ರ ಮಧ್ಯ ರಾತ್ರಿ ಕೃಷ್ಣ ಆಘ್ರ್ಯ ಪ್ರದಾನ ನಡೆಯಲಿದೆ. ಕೃಷ್ಣಷ್ಟಮಿ ಹಿನ್ನಲೆಯಲ್ಲಿ ಕೃಷ್ಣನಿಗೆ ಲಕ್ಷ ತುಳಸೀ ಅರ್ಚನೆಯನ್ನು ಪರ್ಯಾಯ ಅದಮಾರು ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದ್ದಾರೆ. ಮಾತ್ರವಲ್ಲದೇ ವಿಶೇಷ ಮಹಾ ಪೂಜೆಯನ್ನ ನಡೆಸಿದ್ದಾರೆ. ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕೃಷ್ಣನಿಗೆ ಬಾಲಕೃಷ್ಣನ ಅಲಂಕಾರ ಮಾಡಿದ್ದಾರೆ.ಕೃಷ್ಣನನ್ನು ಚಿನ್ನದ ತೊಟ್ಟಿಲಿನಲ್ಲಿ ಇಟ್ಟು ಬಾಲಾಲಂಕಾರ ಮಾಡಿದ್ದು ಗಮನ ಸೆಳೆದಿದೆ. ಕೃಷ್ಣ ಜನ್ಮಾಷ್ಟಮಿಯ ಹಿನ್ನಲೆಯಲ್ಲಿ ಪರ್ಯಾಯ ಶ್ರೀಗಳು ಸಂದೇಶ ನೀಡಿದ್ದಾರೆ.

ಒಟ್ಟಿನಲ್ಲಿ ಭಕ್ತರಿಲ್ಲದೇ ಈ ಬಾರಿ ಕೃಷ್ಣ ಜನ್ಮಾಷ್ಟಮಿ ನಡೆಯಲಿದ್ದು ಸಂಪ್ರದಾಯಯಕಷ್ಟೆ ಸೀಮಿತವಾಗಿದೆ. ಇದರ ಹೊರತಾಗಿಯೂ ಭಕ್ತರಿಗೆ ಜನ್ಮಾಷ್ಟಮಿಯ ಪ್ರಸಾದ ವಿತರಣೆಗಾಗಿ ಲಕ್ಷ ಉಂಡೆ ಚಕ್ಕುಲಿ ತಯಾರಾಗಿದೆ. ಹಾಗೂ ಕನಕನ ಕಿಂಡಿಯಲ್ಲಿ ದೇವರ ದರ್ಶನಕ್ಕೆ ವಿಟ್ಲಪಿಂಡಿಯ ದಿನ ಸಂಜೆಯ ಹೊತ್ತು ವ್ಯವಸ್ಥೆ ಮಾಡಲಾಗಿದೆ.

Related posts

Leave a Reply

Your email address will not be published. Required fields are marked *