Header Ads
Breaking News

ಉಡುಪಿಯಲ್ಲಿ ಕೊರೊನಾ ವೈರಸ್ ವಿರುದ್ಧ ಜಾಗೃತಿ : ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ವಾಷ್ ಬೇಸಿನ್ ಅಳವಡಿಕೆ

ಸ್ವಚ್ಛತೆಯ ವಿಚಾರದಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿರುವ ಉಡುಪಿ ನಗರಸಭೆ ಕರೋನಾ ವೈರಸ್ ವಿರುದ್ಧ ಸಾರ್ವಜನಿಕ ಜನಜಾಗೃತಿ ಮಾಡುತ್ತಿದೆ. ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದೆ. ಸಿಟಿ ಬಸ್ ನಿಲ್ದಾಣದಲ್ಲಿ ನಾಲ್ಕುನಲ್ಲಿಯಿರುವ ವಾಶ್ ಬೇಸಿನ್ ತೆರೆದಿದೆ. ಬಸ್ ಆಟೋದಲ್ಲಿ ಪ್ರಯಾಣಿಸುವವರು ಆಗಾಗ ತಮ್ಮ ಕೈಯನ್ನು ಶುದ್ಧೀಕರಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಒಂದು ಸಾವಿರ ಲೀಟರ್ ನೀರಿನ ಸಿಂಟೆಕ್ಸ್ ಅನ್ನು ಅಳವಡಿಸಿದ್ದು ಸಾರ್ವಜನಿಕರು ಕೈಯನ್ನು ಶುಚಿಗೊಳಿಸಬಹುದು ಎಂದು ವಾಷ್ ಬೇಸಿನ್ ಪಕ್ಕದಲ್ಲೇ ನಮೂದಿಸಲಾಗಿದೆ. ವಾಷ್ ಬೇಸಿನ್ ಆಗಾಗ ಶುಚಿಗೊಳಿಸಲು ಒಬ್ಬ ನಗರಸಭೆಯ ಕಾರ್ಮಿಕರನ್ನು ನೇಮಕ ಮಾಡಿದೆ. ಕೋವಿಡ್ ನೈಂಟೀನ್ ಬಗ್ಗೆ ಭಯ ಬೇಡ- ಸಾರ್ವಜನಿಕರಲ್ಲಿ ಎಚ್ಚರಿಕೆ ಇರಲಿ ಎಂದು ನಗರಸಭೆ ಬ್ಯಾನರ್‍ನಲ್ಲಿ ಉಲ್ಲೇಖಿಸಿದೆ. ಉಡುಪಿ ನಗರಸಭೆ ಜನಪರವಾದ ಕೆಲಸ ಮಾಡಿದೆ ನಾವು ನಮ್ಮ ಶುಚಿತ್ವವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದ ಕೂಡಲೇ ಸಾರ್ವಜನಿಕರು ತಮ್ಮ ಕೈ ಮುಖಗಳನ್ನು ತೊಳೆದಿದ್ದಾರೆ.

Related posts

Leave a Reply

Your email address will not be published. Required fields are marked *