Header Ads
Breaking News

ಉಡುಪಿಯಲ್ಲಿ ಕೊರೋನಾ ವೈರಸ್ ಇಲ್ಲ : ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ನಾಲ್ಕು ಮಂದಿಗೆ ಕೊರೊನಾ ವೈರಸ್ ಇಲ್ಲ ಎಂಬ ಜಿಲ್ಲಾಡಳಿತದ ಸ್ಪಷ್ಟನೆಗೆ ಕೃಷ್ಣನಗರಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನ ಮೂವರು ಹಾಗೂ ಕಾಪು ತಾಲೂಕಿನ ಓರ್ವರು ಚೀನಾ ಪ್ರವಾಸದಿಂದ ಬಂದ ಹಿನ್ನಲೆಯಲ್ಲಿ ಕೆಮ್ಮು ಶೀತ ಜ್ವರ ಕಂಡುಬಂದಿತ್ತು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ರೋಗಿಗಳ ರಕ್ತ ಮತ್ತು ಗಂಟಲಿನ ದ್ರವದ ಸ್ಯಾಂಪಲ್ ಬೆಂಗಳೂರಿಗೆ ಕಳುಹಿಸಲಾಗಿತ್ತು. ಇದೀಗ ವರದಿ ಜಿಲ್ಲಾಸ್ಪತ್ರೆ ವೈಧ್ಯಾಧಿಕಾರಿಗಳ ಕೈಸೇರಿದ್ದು ವರದಿ ಯಲ್ಲಿ ನೆಗೆಟಿವ್ ಕಂಡುಬಂದಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಜಗದೀಶ್ ಪತ್ರಿಕಾ ಪ್ರಕಟನೆ ಮೂಲಕ ಕೊರೊನಾ ವೈರಸ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಜನರು ಆತಂಕ ಪಡಬೇಡಿ ಎಂದು ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *