Header Ads
Header Ads
Header Ads
Breaking News

ಉಡುಪಿಯಲ್ಲಿ ಚೀನಾ ವಸ್ತುಗಳ ಬಹಿಷ್ಕಾರ ಆಂದೋಲನ ಚೀನಾ ವಸ್ತು ಸುಟ್ಟು ಆಂದೋಲನ ಅಜ್ಜರಕಾಡು ಬಳಿ ಹುತಾತ್ಮ ಸೈನಿಕರಿಗೆ ಪುಷ್ಪ ನಮನ

 

ಚೀನಾ ವಸ್ತುಗಳ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್,ಬಜರಂಗದಳ ವತಿಯಿಂದ ಪ್ರತಿಭಟನೆ ನೆಡೆಯಿತು. ಉಡುಪಿಯ ಯುಧ್ಧ ಸ್ಮಾರಕ ಬಳಿ ನಡೆದ ಪ್ರತಿಭಟನೆಯಲ್ಲಿ ಚೀನಾ ವಸ್ತುಗಳನ್ನು ಸುಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು. ಮೊದಲಿಗೆ ಹುತಾತ್ಮರದ ಯೋಧರಿಗೆ ಪುಷ್ಪ ನಮನವನ್ನು ಸಲ್ಲಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದರು.

ಈ ಸಂಧರ್ಭ ಪ್ರತಿಭಟನಾಕಾರನ್ನು ಉದ್ದೇಶಿಸಿ ಭಜರಂಗದಳ ವಿಭಾಗ ಸಂಚಾಲಕ ಸುನಿಲ್ ಮಾತನಾಡಿ, ಚೀನಾ ಪಾಕಿಸ್ಥಾನದೊಂದಿಗೆ ಸೇರಿ ಭಯೋತ್ಪದನೆಗೆ ಕುಮ್ಮಕು ನೀಡುತ್ತಿದೆ. ಗಡಿಯಲ್ಲಿ ಯುದ್ಧದ ವಾತವರಣವನ್ನು ನಿರ್ಮಿಸಿದೆ ಆದರೆ ಚೀನಾದ ಆರ್ಥಿಕ ವ್ಯವಸ್ಥೆ ಭಾರತವನ್ನು ಅವಲಂಭಿಸಿದೆ ಭಾರತದಲ್ಲಿ ಚೀನಿ ಉತ್‌ಪಾದನೆಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದು ಆದರ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಚೀನಾಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ.ಸರಕಾರವು ಕೆಲವು ಒಡಂಬಡಿಗಳನ್ನು ಮಾಡಿಕೊಂಡಿರುದರಿಂದ ಚೀನಾ ವಸ್ತುಗಳನ್ನು ನೀಶೇಧಿಸಲು ಆಗುತ್ತಿಲ್ಲ ಆದ್ದರಿಂದ ಭಾರತೀಯರಾದ ನಾವೇ ಎಚ್ಚೇತ್ತು ಚೀನಾ ವಸ್ತುಗಳ ಬಳಕೆಯನ್ನು ಸ್ಥಗಿತಗೊಳಿಸ ಬೇಕು ಎಂದರು

Related posts

Leave a Reply