Header Ads
Header Ads
Header Ads
Breaking News

ಉಡುಪಿಯಲ್ಲಿ ಜಯಕರ್ನಾಟಕ ಸಭೆ , ಅನೇಕ ಪದಾಧಿಕಾರಿಗಳ ಆಯ್ಕೆ ಬಲಿಷ್ಟ ಸಂಘಟನೆಯತ್ತ ಜಯಕರ್ನಾಟಕ ಉಡುಪಿಯ ಸಂಘಟನೆ ಮಹಿಳಾ ಸಂಘಟನೆಯ ಬಳಿಕ ಇದೀಗ ಖಾಸಗೀ ನೌಕರರ ಘಟಕ

ಉಡುಪಿ ಜಿಲ್ಲೆಯಲ್ಲೇ ಬಲಿಷ್ಟ ಸಂಘಟನೆಯತ್ತ ಜಯಕರ್ನಾಟಕ ಸಂಘಟನೆ ದಾಪುಗಾಲು ಇಟ್ಟಿದೆ. ಜಿಲ್ಲೆಯಾದ್ಯಂತ ಮಹಿಳಾ ಸಂಘಟನೆ ಹುಟ್ಟುಹಾಕುತ್ತಿರುವ ಆಶ್ರಯದಾತ ಕೆ.ರಮೇಶ್ ಶೆಟ್ಟಿ ಅವರ ಅದ್ಯಕ್ಷತೆಯ ಜಯಕರ್ನಾಟಕ ಇದೀಗ ಖಾಸಗಿ ನೌಕರರ ಘಟಕ ಸ್ಥಾಪಿಸಿದೆ. ಮುಂದೆ ವಿದ್ಯಾರ್ಥಿ ಘಟಕ ಸ್ಥಾಪಿಸಿ ಜಿಲ್ಲೆಯಲ್ಲೊಂದು ಜಯಕರ್ನಾಟಕ ಸಂಸ್ಥೆ ಮಾದರಿ ಸಂಸ್ಥೆ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲೆಯಲ್ಲಿ ಹಲವಾರು ಜ್ಯಯಕರ್ನಾಟಕ ಸಂಸ್ಥೆಯ ಘಟಕಗಳನ್ನು ಸ್ಥಾಪಿಸಿ ಅ ಮೂಲಕ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಜನತೆಗೆ ಸೇವೆ ನೀಡುತ್ತಿರುವ ಆಶ್ರಯದಾತ ಕೆ. ರಮೇಶ್ ಶೆಟ್ಟಿ ನೇತೃತ್ವದ ಜಯಕರ್ನಾಟಕ ಇದೀಗ ಖಾಸಗೀ ನೌಕರರ ಘಟಕ ಸ್ಥಾಪಿಸಿದೆ. ಮಹಿಳಾ ಘಟಕ, ವಿದ್ಯಾರ್ಥಿ ಘಟಕ, ರಿಕ್ಷಾ ಘಟಕ ಹೀಗೆ ಅನೇಕ ಘಟಕ ಸ್ಥಾಪಿಸಿ ಅನ್ಯಾಯದ ವಿರುದ್ದ ಹೋರಾಡುತ್ತಿರುವ ಜಯಕರ್ನಾಟಕ ಉಡುಪಿ ಜಿಲ್ಲೆಯ ಸಂಸ್ಥೆ ಇದೀಗ ಖಾಸಗೀ ಬಸ್ ನೌಕರರ ಘಟಕ ಸ್ಥಾಪಿಸಿ ಮತ್ತಷ್ಟು ಬಲಿಷ್ಟಗೊಂದಿದೆ. ಉಡುಪಿಯ ಯಾತ್ರಿ ನಿವಾಸದಲ್ಲಿ ಈ ಬಗ್ಗೆ ಪೂರ್ವಭಾವಿ ಸಭೆ ಜಯಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ರಮೆಶ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.

ಖಾಸಗಿ ಬಸ್ ನೌಕರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಜನ್ಸಾಲೆ, ಅಧ್ಯಕ್ಷರಾಗಿ ಸುಧಾಕರ ಬ್ರಹ್ಮಾವರ, ಶ್ರೀನಿವಾಸ ಪೈ, ಪದ್ಮಪ್ರಸಾದ್, ಅಶೋಕ್, ಮನೋಜ, ಮುಂಜುನಾಥ, ಮುಂತಾದವರು ಆಯ್ಕೆಯಾದರು. ಈ ಸಂದರ್ಭದಲಿ ಜಯಕರ್ನಾಟಕ ಸಂಘಟನೆಯ ಪ್ ಶಶಿಕಾತ್ ಶೆಟ್ಟಿ, ನಿತ್ಯಾನಂದ ಅಮೀನ್, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಕುಂದಾಪುರ ವಲಯ, ಅಣ್ಣಪ್ಪ ಸಂಚಾಲಕರು, ಕರುಣಾಕರ ಮಾರ್ಪಳ್ಳಿ, ರತ್ನಾಕರ ಹಾವಂಜೆ, ಕರುಣಾಕರ ಪೂಜಾರಿ, ಅಕ್ಬರ್ ಬಾಷಾ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply