Header Ads
Header Ads
Breaking News

ಉಡುಪಿಯಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ:ಯಡಿಯೂರಪ್ಪ, ಅಮಿತ್ ಶಾ ವಿರುದ್ಧ ಘೋಷಣೆ

ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಆಪರೇಶನ್ ಕಮಲದ ವಿರುದ್ದ ಇಂದು ಉಡುಪಿಯಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು. ಅಜ್ಜರಕಾಡು ಹುತಾತ್ಮ ವೇದಿಕೆಯ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಈ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ಅಮಿತ್ ಶಾ ಮತ್ತು ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಬಿಜೆಪಿ ಪದೇಪದೆ ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡ್ತಾ ಇದೆ. ಬಿಜೆಪಿ ಮುಖಂಡರು ಇದರಲ್ಲಿ ಯಶಸ್ವಿಯಾಗಲ್ಲ.ಈ ಹಿಂದೆ ಕೂಡ ಬೇರೆ ಪಕ್ಷಗಳ ಶಾಸಕರಿಗೆ ಆಮಿಷ ತೋರಿಸಿ ಸರಕಾರ ಬೀಳಿಸುವ ಯತ್ನವನ್ನು ಬಿಜೆಪಿ ಮಾಡಿತ್ತು. ಅದರಲ್ಲಿ ವಿಫಲವಾದ್ರೂ ಬಿಜೆಪಿಗೆ ಬುದ್ದಿ ಬಂದಿಲ್ಲ. ಕುಮಾರಸ್ವಾಮಿಯವರು ಉತ್ತಮವಾಗಿ ಆಡಳಿತ ನಡೆಸ್ತಿದ್ದಾರೆ.ಆದರೆ ಸರಕಾರ ರಚಿಸಿಯೇ ತೀರುತ್ತೇವೆ ಎಂಬ ಹಗಲು ಕನಸು ಕಾಣ್ತಿರುವ ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗೆ ಇಳಿದಿದ್ದಾರೆ. ಇನ್ನು ಮುಂದೆ ಆಪರೇಷನ್ ಕಮಲಕ್ಕೆ ಇಳಿದರೆ ಜೆಡಿಎಸ್ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಹೇಳಿದ್ದಾರೆ.

Related posts

Leave a Reply