Header Ads
Header Ads
Breaking News

ಉಡುಪಿಯಲ್ಲಿ ಜೆನರ್ಮ್ ಬಸ್ ಓಡಾಟಕ್ಕೆ ತಡೆಯಾಜ್ಞೆ, ಬಿಜೆಪಿ ಕಾಸಗಿ ಬಸ್ ಲಾಬಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ


ವರ್ಷಗಳ ಹಿಂದೆ ಆರಂಭವಾಗಿದ್ದ ಜೆನರ್ಮ್ ಬಸ್‌ಗಳ ಪೈಕಿ ಸುಮಾರು ೫೩ ಬಸ್‌ಗಳಿಗೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದ ಖಾಸಗಿ ಬಸ್ ಮಾಲಕರ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಉಡುಪಿಯ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಖಾಸಗಿ ಮಾಲಕರ ಮೂಲಕ ತಡೆಯಾಜ್ಞೆಗೆ ಕಾರಣವಾದ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಖಾಸಗೀಯವರ ಲಾಬಿಗೆ ಮಣಿಯದೇ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಡವರಿಗೆ, ವಿದ್ಯಾರ್ಥಿಗಳಿಗೆ ನೆರವಾಗಲಿ ಎಂಬ ಕಾರಣಕ್ಕೆ ಜೆನರ್ಮ್ ಬಸ್‌ಗಳ ಒಡಾಟಕ್ಕೆ ಕಾರಣೀಕರ್ತರಾದರು.
ಬಿಜೆಪಿಯ ಮುಖಂಡರೇ ಆದ ಖಾಸಗೀ ಮಾಲಕ ಸುರೇಶ್ ನಾಯ್ಕ್ ಕುಯಿಲಾಡಿ ಹಾಗೂ ಇತರ ಬಿಜೆಪಿ ಮುಖಂಡರು ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಪ್ರತೀ ಬಾರಿ ಪ್ರತಿಭಟನೆ ನಡೆಸುವ ಬಿಜೆಪಿಗರು ಯಾಕೆ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕಾರ್ಪರೇಟ್ ಕಂಪೆನಿಗಳ ಪರವಾಗಿರುವ ಬಿಜೆಪಿ ತನ್ನ ಅಜೆಂಡಾವನ್ನು ಇಲ್ಲಿ ಮತ್ತೆ ಎತ್ತಿ ತೋರಿಸಿದೆ. ಪ್ರತಿಭಟನಾ ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸಂಧ್ಯಾ ತಿಲಕ್ ರಾಜ್, ಜನಾರ್ದನ್ ಭಂಡಾರ್ಕರ್, ಯುವರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೇನಿಕಾ ಕರ್ನೇಲಿಯೋ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply