Header Ads
Breaking News

ಉಡುಪಿಯಲ್ಲಿ ತೀರಾ ಅಸಹಾಯಕ ಪರಿಸ್ಥಿತಿಯಲಿದ್ದ ಒಂಟಿ ಮನೋರೋಗಿಯ ರಕ್ಷಣೆ

ದೈಹಿಕವಾಗಿ ಅನಾರೋಗ್ಯಕ್ಕೆ ಈಡಾದ ಗಣಪತಿ ಶಣೈ ಎಂಬುವರನ್ನು ವಿಶುಶೆಟ್ಟಿ ಅಂಬಲಪಾಡಿಯವರು ಪೆರ್ಡೂರಿನ ಹುಮ್ಯಾನಿಟಿ ತಂಡದ ತುಕರಾಮ್ ನಾಯಕ್ ಹಾಗೂ ಸ್ಥಳಿಯ ಸಾರ್ವಜನಿಕರ ನೆರವಿನಿಂದ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ರೋಗಿಯು ಕಳೆದ ಹತ್ತು ವರ್ಷಗಳಿಂದ ಮನೋರೋಗಿಯಾಗಿ ಸಾರ್ವಜನಿಕರು ನೀಡಿದ ಆಹಾರ ಸ್ವೀಕರಿಸಿ ದಿನ ಕಳೆಯುತ್ತಿದ್ದರು. ಹಸಿವಾದಾಗ ಕೂಗಿ ಆಹಾರ ಕೊಡಿ ಎನ್ನುತ್ತಿದ್ದ ಸಂದರ್ಭದಲ್ಲಿ ಸ್ಥಳಿಯ ಸಾರ್ವಜನಿಕರು ಆಹಾರ ನೀಡುತ್ತಿದ್ದರು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಸ್ಥಳಿಯರು ವಿಶುಶೆಟ್ಟಿಯವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಕೂಡಲೆ ವಿಶುಶೆಟ್ಟಿ ಮಿತ್ರ ತುಕರಾಮ್ ನಾಯಕ್ ರೊಂದಿಗೆ ದಾವಿಸಿದ್ದಾರೆ. ರೋಗಿಯ ಮನವೋಲಿಸಿ ತನ್ನದೆ ವಾಹನದಲ್ಲಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Related posts

Leave a Reply

Your email address will not be published. Required fields are marked *