Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿಯಲ್ಲಿ ನಡೆದ ವಿಶ್ವ ಮನೋರೋಗ ದಿನ

ಕೂಡುಕುಟುಂಬ ಪದ್ಧತಿ ಅವನತಿಯೇ ಆತ್ಮಹತ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ  ಪ್ರೋ. ಕೆ.ಎಸ್. ಅಡಿಗ ಅಭಿಪ್ರಾಯಪಟ್ಟಿದ್ದಾರೆ.

ಕಮಲಾ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಡಾ.ಎವಿ ಬಾಳಿಗಾ ಮೆಮೋರಿಯಲ್ ಕಾಲೇಜು ಹಾಗೂ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ಎವಿ ಬಾಳಿಗಾ ಆಸ್ಪತ್ರೆಯಲ್ಲಿ ಜರಗಿದ ವಿಶ್ವ ಮನೋರೋಗ ದಿನದ ಹಿನ್ನಲೆಯಲ್ಲಿ ಹಮ್ಮಿಕೊಂಡ ಆತ್ಮಹತ್ಯೆ ತಡೆ ವಿಚಾರದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಮುಖವಾಗಿ ಕೂಡುಕುಟುಂಬದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಮಾತನಾಡಿ ಬಗೆಹರಿಸಲು ಮನೆಯ ಸದಸ್ಯರಿದ್ದರು.ಆದ್ರೆ ಈಗ ಸಮಸ್ಯೆ ಹೇಳಿಕೊಳ್ಳಲು ಯಾರೂ ಇಲ್ಲ. ಇದರಿಂದಲೂ ಆತ್ಮಹತ್ಯೆ ಹೆಚ್ಚಾಗಲು ಕಾರಣವಾಗಿದೆ. 2014ರ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದ ಪ್ರಕಾರ ವಿಶ್ವದಲ್ಲಿ 40 ಸೆಕೆಂಡಿಗೊಮ್ಮೆ ಆತ್ಮಹತ್ಯೆಗೆ ಶರಣಾಗುತ್ತಾರೆ. 15ರಿಂದ 50 ವರ್ಷದ ಒಳಗಿನ ವಯೋಮಾನದವರೇ ಹೆಚ್ಚಾಗಿ ಆತ್ಮಹತ್ಯೆಯಮ್ಮ ಮಾಡಿಕೊಳ್ಳುತ್ತಿದ್ದಾರೆ. ಮುಂದುವರೆದ ಅಮೇರಿಕಾದಲ್ಲೂ ಸಹ ಸಾವಿಗೆ ಪ್ರ,ಮುಖವಾದ ಕಾರಣವಾಗಿರುವ ಪಟ್ಟಿಯಲ್ಲಿ ಆತ್ಮಹತ್ಯೆ 10ನೇ ಸ್ಥಾನದಲ್ಲಿದೆ ಇದು ಅತ್ಯಂತ ಅಪಾಯಕಾರಿಯಾಗಿದ್ದು ನಮ್ಮ ದೇಶದಲ್ಲೂ ಸಹ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅದ್ಯಕ್ಷತೆಯನ್ನು ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ಪಿವಿ ಭಂಢಾರಿ ವಹಿಸಿದ್ದರು. ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *