Header Ads
Breaking News

ಉಡುಪಿಯಲ್ಲಿ ನಡೆಯಿತು ವಿಶಿಷ್ಟ ಮದುವೆ..! ಲೋಕಕಲ್ಯಾಣಕ್ಕಾಗಿ ನಡೆಯಿತು ಮದುವೆ ಕಾರ್ಯ..!

 ಇಲ್ಲೊಂದು ಕಲ್ಯಾಣ ನಡೆದಿದೆ ನೋಡಿ .ಇದು ಅಂತಿಂತ ಕಲ್ಯಾಣ ಅಲ್ಲ. ಲೋಕಕಲ್ಯಾಣಕ್ಕೊಂದು ಕಲ್ಯಾಣ. ಬ್ಯಾಂಡ್ ವಾಲಗದೊಂದಿಗೆ ಮಧು ವರರ ದಿಬ್ಬಣ, ಸೈಕಲ್ ರಥವೇರಿ ಮದುವಣಗಿತ್ತಿಯ ಪುರಸವಾರಿ.. ಉಡುಪಿಯ ಕಿದಿಯೂರು ಹೊಟೇಲ್ ಅದ್ದೂರಿ ಮದುವೆ. ಎಸ್ ಇದು ಮನಮೋಹಕ ಮಂಡೂಕ ವಿವಾಹದ ಕಥಾನಕ. 

 .ಮಳೆ ಇಲ್ಲ …ನೀರಿಲ್ಲ ..ಬದುಕು ಬಲು ಕಷ್ಟವಾಗಿದೆ. ಅದ್ರೆ ನೋವಿನ ನಡುವೆಯು ಮದುವೆ ಸಂಭ್ರಮ. ಮದುವೆ ಅದ್ಬುತ ಸಿದ್ದತೆ. ಆ ನವ ಜೋಡಿಗೆ ಮದುವೆ ನಡೆದೇ ಬಿಟ್ಟಿತು. ಮಂಗಳವಾದ್ಯ ವೇದ ಘೋಷದೊಂದಿಗೆ ಆ ವಧೂವರರು ವಿವಾಹ ಬಂಧನಕ್ಕೆ ಒಳಗಾದ್ರು. ಆ ಜೋಡಿ ಯಾರು ಗೊತ್ತ ವರುಣ ಮತ್ತು ವರ್ಷ ಎಂದು ಹೆಸರಿಡಲಾದ ಕಪ್ಪೆಗಳು. ಹೌದು, ಉಡುಪಿಯಲ್ಲಿ ಮಂಡೂಕ ಪರಿಣಯ ನಡೆದಿದೆ. ಮಳೆಗಾಲ ಬರುವ ಕಾಲ ಸನ್ನಿಹಿತವಾದ್ರೂ ಮಳೆರಾಯ ಇನ್ನೂ ಕೃಪೆ ತೋರಿಲ್ಲ. ಮಳೆಯ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯ ಹಲವು ದೇವಸ್ಥಾನ ಗಳಲ್ಲಿ ಮಳೆಗಾಗಿ ಪ್ರಾರ್ಥನೆ ಪೂಜೆ ಸಲ್ಲಿಕೆಯಾಗುತ್ತಿದೆ ಅದ್ರೆ ಮಳೆಯ ಸುಳಿವು ಮಾತ್ರ ಇಲ್ಲ.ವರುಣನ ಕೃಪೆಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಟ್ರಸ್ಟ್ ಕಪ್ಪೆ ಮದುವೆ ನಡೆಸಿದೆ.

 ಮದುವೆಗಾಗಿ ಆಹ್ವಾನ ಪತ್ರಿಕೆ ಕೂಡ ಹಂಚಲಾಗಿತ್ತು. ವರ ವರುಣ ಮತ್ತು ವಧು ವರ್ಷಾ ವಿವಾಹವನ್ನು ಉಡುಪಿ ಕಿದಿಯೂರ್ ಹೋಟೆಲ್ ಪ್ರಾಂಗಣದಲ್ಲಿ ನಡೆಸಲಾಯಿತು. ಮದುವೆ ದಿಬ್ಬಣವನ್ನು ಮಾರುತಿ ವಿಥಿಕಾ _ಡಯಾನ ಸರ್ಕಲ್ ಮೂಲಕ ಕಿದಿಯೂರು ಹೊಟೇಲ್ ಸಭಾಂಗಣ ತೆರಳಿ ಸಭಾಂಗಣ ಸೇರಿತು. ಒಂದು ವಾರದಿಂದ ಕಪ್ಪೆಗಳಿಗಾಗಿ ಹುಡುಕಾಟ ನಡೆಸಿ ಕಿಳಿಂಜೆ ವಧು ಮತ್ತು ಕಲ್ಸಂಕ ವರ (ಕಪ್ಪೆಗಳನ್ನು)ಮೆಡಿಕಲ್ ಲ್ಯಾಬ್ ನಲ್ಲಿ ಗುರುತಿಸಿ ಮದುವೆ ಜೋಡಿ ಆಯ್ಕೆ ನಡೆಸಲಾಗಿತ್ತು ಮಧ್ಯಾಹ್ನ ೧೨.೦೫ರ ಸಿಂಹ ಲಗ್ನ ಸುಮೂರ್ತದಲ್ಲಿ ಗಂಟೆಗೆ ಮಳೆ ಬರುವಂತೆ ವರುಣನಿಗೆ ಪ್ರಾರ್ಥನೆ ಸಲ್ಲಿಸಿ ಮದುವೆ ಕಾರ್ಯ ನೇರವೇರಿಸಲಾಯಿತು. ನಿತ್ಯಾನಂದ ಒಳಕಾಡು ನೇತೃತ್ವದ ನಾಗರೀಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಂಡೂಕ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು. ಎಲ್ಲವೂ ಹಿಂದೂ ಧಾರ್ಮಿಕ ವಿಧಿ ವಿಧಾನದ ಮೂಲಕ ಮಂಡೂಕ ಕಲ್ಯಾಣ ನೆರವೇರಿತು. ಒಂದವರು ವರ-ವಧುವರನ್ನು ಹರಸಿದರು.

 ವರುಷಗಳ ಹಿಂದೆ ಕೂಡ ಮಳೆ ಇಲ್ಲದ ಕಾಲದಲ್ಲಿ ಇದೇ ನಾಗರಿಕ ಸಮಿತಿ ಕಪ್ಪೆ ಮದುವೆಯನ್ನು ನಡೆಸಿತ್ತು.ಒಂದು ವಾರ ಕಾಲ ನಿರತ ಮಳೆ ಕೂಡ ಸುರಿದ್ದಿತು.ವಾರ ನಂತ್ರ ಸಮಾಜಿಕ ಜಾಲತಾಣದಲ್ಲಿ ಕಪ್ಪೆಗಳಿಗೆ ವಿಚ್ಚೇದನ ಕೊಡಿಸಿ ಅನ್ನೊ ಮೇಸೆಜ್ ಹರಿದಾಡಿತ್ತು. ಈ ಬಾರಿ ಕಪ್ಪೆಕಲ್ಯಾಣದ ನಂತ್ರವಾದ್ರು ಮಳೆಯಾಗುತ್ತಾ? ಜನ ಮಾನಸದೊಳಗಿನ ನಂಬಿಕೆಗೆ ಪುಷ್ಠಿ ನೀಡಿ ವರುಣ ದೇವ ಕೃಪೆ ತೋರ್ತಾನಾ? ಭೂಮಿ ತಂಪು ಮಾಡೊಕೆ ಮನಸ್ಸುಮಾಡುತ್ತಾನಾ … ಆಕಾಶದ ಕಡೆ ಕಣ್ಣು ಹಾಯಿಸಿ ಕಾದು ನೋಡಬೇಕು.

Related posts

Leave a Reply

Your email address will not be published. Required fields are marked *