Header Ads
Header Ads
Breaking News

ಉಡುಪಿಯಲ್ಲಿ ನಿನ್ನೆ ರಾತ್ರಿ ಬಿರುಗಾಳಿ, ಮಳೆ ಅಬ್ಬರ ಧರೆಗೆ ಉರುಳಿದ ಮರ-ವಿದ್ಯುತ್ ಕಂಬ

ಉಡುಪಿಯಲ್ಲಿ ದಿನವಿಡೀ ಪವರ್ ಕಟ್ ಉಡುಪಿಯ ದೊಡ್ಡಣಗುಡ್ಡೆ, ಅಂಬಾಗಿಲು, ಪೆರಂಪಳ್ಳಿ ಬ್ರಹ್ಮಗಿರಿ, ಅಜ್ಜರಕಾಡು, ಗುಂಡಿಬೈಲಿನಲ್ಲಿ ವಿದ್ಯುತ್ ಸ್ಥಗಿತ ಸಾಲು ಸಾಲು ರಸ್ತೆಗುರುಳಿದ ವಿದ್ಯುತ್ ಕಂಬಗಳುನಿನ್ನೆ ಸುರಿದ ಬಿರುಗಾಳಿ ಸಹಿಯ ಭಾರೀ ಮಳೆಗೆ ನಗರದ ಚಿತ್ರಣವೇ ಸಂಪೂರ್ಣ ಬದಲಾಗಿದೆ.

ರಾತ್ರಿ ಏಕಾಏಕಿ ಸಿಡಿಲು ಮಿಂಚು ಜೊತೆಗೆ ಬಿರುಗಾಳಿ ಸಹಿತ ಮಳೆ ಬಿದ್ದ ಕಾರಣ ನಗರದ ಹಲವೆಡೆ ಭಾರೀ ಗಾತ್ರದ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿದೆ. ಕೆಲವೆಡೆ 200ರಿಂದ 300ವರ್ಷಗಳಷ್ಟು ಹಳೆಯ ಮರಗಳು ಮನೆಯ ಮೇಲೆ ಉರುಳಿ ಬಿದ್ದಿದೆ. ನಗರದ ದೊಡ್ಡಣಗುಡ್ಡೆ, ಅಂಬಾಗಿಲು, ಪೆರಂಪಳ್ಳಿ, ಬ್ರಹ್ಮಗಿರಿ, ಅಜ್ಜರಕಾಡು, ಗುಂಡಿಬೈಲು ಹೀಗೆ ಹಲವು ಪ್ರದೇಶಗಳಲ್ಲಿ ಸಾಲು ಸಾಲು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು ನಿನ್ನೆ ರಾತ್ರಿಯಿಂದ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ಉಡುಪಿಯ ಬ್ರಹ್ಮಗಿರಿಯಲ್ಲಿರುವ ಎಸ್ಪಿ ಕಚೇರಿಯ ಕಂಪೌಂಡ್ ವಾಲ್ ಕೂಡ ಕುಸಿದಿದೆ. ಹೀಗೆ ಉಡುಪಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು ಜನಜೀವನ ಅಸ್ಥವ್ಯಸ್ಥಗೊಂಡಿದೆ.

Related posts

Leave a Reply