Header Ads
Header Ads
Header Ads
Breaking News

ಉಡುಪಿಯಲ್ಲಿ ಪತ್ತನಾಜೆ ಚಿತ್ರಬಿಡುಗಡೆ ಆಶೀರ್ವಾದ್ ಚಿತ್ರ ಮಂದಿರದಲ್ಲಿ ಬಿಡುಗಡೆ ಹಲವು ಗಣ್ಯರ ಶುಭ ಹಾರೈಕೆ

ತುಳು ಚಿತ್ರರಂಗದ ವಿಬಿನ್ನ ಕಲ್ಪನೆಯ, ತುಳು ಸಂಸ್ಕೃತಿಯನ್ನು ಬಿಂಬಿಸುವ ಕಥೆ-ಚಿತ್ರಕಥೆ-ನಿರ್ದೇಶನ, ನಿರ್ಮಾಣ ಮಾಡಿರುವ ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರ ಚೊಚ್ಚಲ ತುಳು ಚಿತ್ರ ಪತ್ತನಾಜೆ ಉಡುಪಿಯ ಆಶೀರ್ವಾದ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ.

ನಟನಾ ಪಾಂಡಿತ್ಯ ಹೊಂದಿರುವ ಕಲಾವಿದರು ನಟಿಸಿರುವ ಅದ್ಭುತ ಚಿತ್ರ ಪತ್ತನಾಜೆ. ತುಳುಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ತುಳುವಿನ ಗಂಡುಕಲೆಯನ್ನು ಹೇರಳವಾಗಿ ಬಳಸಿ, ವಿಬಿನ್ನ ಕಥೆಯೊಂದಿಗೆ ಪತ್ತನಾಜೆ ದಿನದಂದು ಹುಟ್ಟಿದ ಹೆಣ್ಣಿನ ಕಥೆಯೊಂದನ್ನು ಆದರಿಸಿ ಮಾಡಿರುವ ಪತ್ತನಾಜೆ ಚಿತ್ರ ಉಡುಪಿಯಲ್ಲಿ ಇಂದು ರಿಲೀಸ್ ಆಗಿದೆ. ಆಶೀರ್ವಾದ್ ಚಿತ್ರಮಂದಿರದಲ್ಲಿ ಪತ್ತನಾಜೆ ಬಿಡುಗಡೆ ಸಮಾರಂಭ ನಡೆಯಿತು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಚಿತ್ರಗಳಿಗೆ ಸಿಗುತ್ತಿರುವ ಸಬ್ಸಿಡಿ ಸೇರಿದಂತೆ ಅನೇಕ ಸವಲತ್ತುಗಳನ್ನು ತುಳು ಚಿತ್ರಗಳಿಗೂ ಸಿಗುವಂತೆ ಮುಂದಿನ ಅದಿವೇಶನದಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಕೋಟ ತಿಳಿಸಿದರು. ಚಿತ್ರದ ಬಗ್ಗೆ ನಿರ್ದೇಶಕ ತೋನ್ಸ್ ವಿಜಯ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನಗರಸಭಾ ಅದ್ಯಕ್ಷೆ ಮೀನಕ್ಷಿ ಮಾಧವ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ರಘುಪತಿಭಟ್, ಪುರುಶೊತ್ತಮ್ ಶೆಟ್ಟಿ, ಮನೋಹರ್ ಶೆಟ್ಟಿ, ರಘುರಾಮ್ ಶೆಟ್ಟಿ,ಇಂದ್ರಾಳಿ ಜಯಕರ್ ಶೆಟ್ಟಿ ಮುಂತದವರು ಉಪ್‌ಸ್ಥಿತರಿದ್ದರು.

ಇದೇ ಸಂದರ್ಬ ಕು. ಶಾಸ ಶೆಟ್ಟಿ ಹಾಗೂ ವರ್ಷ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವರದಿ:ಪಲ್ಲವಿ ಸಂತೋಷ್

Related posts

Leave a Reply