Header Ads
Header Ads
Header Ads
Breaking News

ಉಡುಪಿಯಲ್ಲಿ ಪರಿಸರ ಪ್ರೇಮಿ ಮಾನಸಿಕ ವ್ಯಕ್ತಿ ಪರಿಸರ ಪ್ರೇಮಿ ಕಾಳಜಿಗೆ ಆಶ್ಚರ್ಯರಾದ ಸಾಮಾಜಿಕ ಕಾರ್ಯಕರ್ತರು ಸಮಾಜದ ಮುಖ್ಯವಾಹಿನಿ ತರಲು ಯತ್ನ

 

 ಈ ವ್ಯಕ್ತಿಯ ಮಾನಸಿಕ ಅಸ್ವಥತೆ ಪರಿಸರ ಪ್ರೇಮಕ್ಕೆ ಅಡ್ಡಿಯಾಗಿಲ್ಲ. ದಿನವೂ ಸುತ್ತಮುತ್ತ ತಿರುಗಾಡಿ ತ್ಯಾಜ್ಯ ಸಂಗ್ರಹಿಸುವುದು ಈ ವ್ಯಕ್ತಿಯ ಕಾಯಕ. ಪ್ರತಿಫಲ ಅಪೇಕ್ಷೆ ಇಲ್ಲದೇ ಮಾಡುವ ಈ ಕಾರ್ಯ, ಸ್ಥಳೀಯರ ಗಮನ ಸೆಳೆದಿದೆ. ಉಡುಪಿ ನಗರದ ಹೊರ ವಲಯದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ, ಕಟ್ಟೆಗುಡ್ಡೆ, ಗುಡ್ಡೆಯಂಗಡಿ ಪರಿಸರಗಳಲ್ಲಿ ಮಾನಸಿಕ ವ್ಯಕ್ತಿಯೋರ್ವ ಪ್ರತಿನಿಧ್ಯ ತಿರುಗಾಡಿ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ, ಕಳೆದ ಒಂದು ತಿಂಗಳಿಂದ ಎಲ್ಲಿಂದಲೋ ವಲಸೆ ಬಂದ ಮಾನಸಿಕ ವ್ಯಕ್ತಿಯೊಬ್ಬ,

ಗುಡ್ಡೆಯಂಗಡಿ ಪರಿಸರದಲ್ಲಿ ಕಸ ಕಡ್ಡಿ ಹೆಕ್ಕಿ ಬಸ್ಸು ತಂಗುದಾಣಗಳನ್ನು ಶುಚಿ ಮಾಡುತ್ತ ಪರಿಸರ ಸ್ನೇಹಿಯಾಗಿ ದಿನಕಳೆಯುತ್ತಿದ್ದ.ಅಸಹಾಯಕ ಪರಿಸ್ಥಿಯಲ್ಲಿದ್ದ ಸುಮಾರು 50 ವರ್ಷ ಪ್ರಾಯದ ಗಂಡಸನ್ನು ರಕ್ಷಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತ ಪ್ರಯತ್ನಕ್ಕೆ ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಶಿರೂರು ತಾರಾನಾಥ್ ಮೇಸ್ತ ಮುಂದಾಗಿದ್ದಾರೆ.

Related posts

Leave a Reply