Header Ads
Breaking News

ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ: 70ಮಂದಿ ನಿವೃತ್ತರಿಗೆ ಸಹಾಯಧನ ವಿತರಣೆ

 ಉಡುಪಿ ಜಿಲ್ಲಾ ಪೊಲೀಸ್  ವತಿಯಿಂದ ರಾಜ್ಯ ಪೊಲೀಸ್  ದ್ವಜ ದಿನಾಚರಣೆ ಉಡುಪಿಯ ಶಸಸ್ತ್ರ ಮೀಸಲು ಪಡೆಯ ಕೇಂದ್ರಿಯ ಸ್ಥಳ ಚಂದು ಮೈದಾನದಲ್ಲಿಂದು ನಡೆಯಿತು. ಧ್ವಜ ದಿನಾಚರಣೆಯ ಅಂಗವಾಗಿ ಪೊಲೀಸ್ ವಿಭಾಗಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ ಕೃಷ್ಣ ಕಾವಾಯರು ತಂಡಗಳ ಗೌರವ ವಂದನೆ ಸ್ವೀಕರಿಸಿ ಬಳಿಕ ಪೊಲೀಸ್  ದ್ವಜದ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 70 ಮಂದಿಗೆ ಸುಮಾರು 3,13,174 ಮೊತ್ತದ ಸಹಾಯಧನ ವಿತರಿಸಲಾಯಿತು. ಈ ಸಂದರ್ಬದಲ್ಲಿ ಮಾತನಾಡಿದ ಗೋಪಾಲಕೃಷ್ಣ ಆರೋಗ್ಯ ಯೋಜನೆಯಡಿ ಕೆ.ಎಂ.ಸಿ ಆಸ್ಪತ್ರೆಯಲ್ಲಿಸಿಗುತ್ತಿರುವ 15% ಸೌಲಭ್ಯದ ಮಿತಿಯನ್ನ 50ಕ್ಕೆ ಏರಿಸಬೇಕು ಅಂತ ಎಸ್ಪಿಯವರಲ್ಲಿ ವಿನಂತಿಸಿದರು. ಸಮಾರಂಭ್ಹದಲ್ಲಿ ಎಸ್ಪಿ ನಿಶಾ ಜೇಮ್ಸ್, ಎ ಎಸ್ಪಿ ಕುಮಾರಚಂದ್ರ, ಎ ಎಸ್ಪಿ ಕೃಷ್ಣಕಾಂತ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *