Header Ads
Header Ads
Breaking News

ಉಡುಪಿಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರೀಯೆ ಬಸ್ ಬಿಟ್ಟರೆ ಎಲ್ಲಾ ಸೇವೆ ಲಭ್ಯ

ಉಡುಪಿ ಜಿಲ್ಲೆಯಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಶಾಂತಿಯುತವಾಗಿದೆ. ಬಿಜೆಪಿ ಭದ್ರಕೋಟೆಯಲ್ಲಿ ಅಂಗಡಿಮುಗ್ಗಟ್ಟುಗಳು ತೆರೆದಿವೆ. ಆದರೆ ಸಾರಿಗೆಯ ಪ್ರಮುಖ ಸಾಧನ ಖಾಸಗಿ ಬಸ್‌ಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ನಗರದಾದ್ಯಂತ ಜನರ ಸಂಚಾರ ವಿರಳವಾಗಿದೆ. ಶಾಲಾ ಕಾಲೇಜಯಗಳಿಗೆ ಜಿಲ್ಲಾಡಳಿತ ನಿನ್ನೆಯೇ ರಜೆ ಘೋಷಿಸಿತ್ತು. ಬೆಳಿಗ್ಗೆ ಖಾಸಗಿ ಬಸ್ ಚಾಲಕರು ಎಂದಿನಂತೆ ಕರ್ತವ್ಯ ನಿರ್ವಹಿಸಲು ಬಂದಾಗ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.ಈ ಚಕಮಕಿಗೆ ಕಾರಣ, ಆಟೋ ಚಾಲಕರು. ಆಟೋ ಚಾಲಕರು ಬಂದ್‌ನ ಸಂಪೂರ್ಣ ಲಾಭ ಪಡೆಯಲು ಮುಂಜಾನೆಯಿಂದಲೇ ಆಟೋ ಸಂಚಾರ ಪ್ರಾರಂಭಿಸಿದ್ದರು.ಬಸ್ ಚಾಲಕರು ಕರ್ತವ್ಯಕ್ಕೆ ಅಣಿಯಾದಾಗ, ಕಾರ್ಮಿಕ ಸಂಘಟನೆ ಮುಖಂಡರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದ್ರುಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಬಸ್ ಚಾಲಕರು, ಆಟೋ ಚಾಲಕರು ಎಂದಿನಂತೆ ಕಾರ್ಯನಿರ್ವಹಿಸ್ತಿದ್ದಾರೆ. ನಾವೂ ಕರ್ತವ್ಯ ಮಾಡುತ್ತೇವೆ ಎಂದು ಏರುದನಿಯಲ್ಲಿ ಹೇಳಿದ್ರು. ಇದು ಕೆಲಕಾಲ ಮಾತಿನಚಕಮಕಿಗೆ ಕಾರಣವಾಗಿದ್ರಿಂದ, ಪೊಲೀಸರು ಹೆಚ್ಚಿನ ಭದ್ರತಾ ಕ್ರಮಕೈಗೊಂಡ್ರು. ಇನ್ನು ನಗರದ ಪ್ರಧಾನ ಅಂಚೆಕಚೇರಿ ಎದುರು ಡೋಲು ಬಡಿದು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಯಿತು.

ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ಚಿತ್ರ ಮಂದಿರ ಎಂದಿನಂತೆ ತೆರೆದಿವೆ.

Related posts

Leave a Reply