Header Ads
Header Ads
Header Ads
Breaking News

ಉಡುಪಿಯಲ್ಲಿ ಬಿಜೆಪಿ ಪ್ರಮುಖರ ಸಭೆ ರಾಜ್ಯ ಸರ್ಕಾರ ಭಯೋತ್ಪಾದಕರ ಜೊತೆ ಕೈ ಜೋಡಿಸಿದೆ ಉಡುಪಿಯಲ್ಲಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿಕೆ

ನೂರು ದಿನಗಳ ಬಳಿಕ ಕರ್ನಾಟಕದಲ್ಲಿ ಕಾಂಗ್ರೇಸ್ ಗೋನ್… ಹೀಗೆ ಅಂತ ರಾಜ್ಯ ಸರ್ಕಾರ ವಿರುದ್ದ ಇಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಗುಡುಗಿದರು.

ಉಡುಪಿಯ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಇದು ಬಿಜೆಪಿ-ಕಾಂಗ್ರೆಸ್ ಸಂಸ್ಕೃತಿಗಳ ಸಂಘರ್ಷ. ಅಂದು ಅಹಿಂದ ಅಂದಿದ್ರು ಸಿದ್ದರಾಮಯ್ಯ..ಆದ್ರೆ ಭೃಷ್ಟಾಚಾರ ಬಿಟ್ಟು ಏನೂ ಮಾಡಿಲ್ಲ ಅಂತ ಟಾಂಗ್ ನೀಡಿದರು.

ಸಿದ್ದರಾಮಯ್ಯ ಕೃಷ್ಣಮಠಕ್ಕೂ ಬರಲ್ಲ. ಈಗ ರಾಹುಲ್ ಗಾಂಧಿ ಮಠಕ್ಕೆ ಬರ್ತಾರಂತೆ ಚುನಾವಣೆ ಎದುರಾದಾಗ ದೇವಸ್ಥಾನದ ನೆನಪು ಕಾಂಗ್ರೆಸ್‌ಗೆ ಆಗುತ್ತಿದೆ ಎಂದರು.

ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಕಾನೂನು ಬಾಹಿರ ಎಂದ ಜಾವ್ಡೇಕರ್ ಇದು ಚುನಾವಣಾ ಆಯೋಗದ ನಿಯಮಾವಳಿಗೆ ವಿರುದ್ದವಾಗಿದೆ ಚುನಾವಣಾ ತಯಾರಿಯ ವೇಳೆ ವರ್ಗ ಮಾಡಬಾರದು ಅನ್ನುತ್ತೆ ಆಯೋಗ ಆದ್ರೆ ರಾಜ್ಯ ಸರ್ಕಾರ ಈ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದರು.

Related posts

Leave a Reply