Header Ads
Header Ads
Breaking News

ಉಡುಪಿಯಲ್ಲಿ ಬ್ಯಾಂಕ್ ಮುಷ್ಕರ: ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ

ಉಡುಪಿ: ಬ್ಯಾಕಿಂಗ್ ಕ್ಷೇತ್ರದ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬ್ಯಾಂಕ್ ಬಂದ್‍ಗೆ ಉಡುಪಿಯಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬ್ಯಾಕಿಂಗ್ ಗಳ ತವರು ಎಂದು ಕರೆಸಿಕೊಳ್ಳುವ ಉಡುಪಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಕ್ಯಾಥೋಲಿಕ್ ಸೆಂಟರ್ ಬ್ರಾಂಚ್‍ನಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಬ್ಯಾಂಕ್ ನೌಕರರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬ್ಯಾಂಕ್ ಗಳ ವಿಲೀನದ ಬಗ್ಗೆ ವ್ಯಾಪಕ ಆಕ್ರೋಷ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾರಕವಾಗಿದೆ ಮತ್ತು ನೌಕರ ವಿರೋಧಿಯಾಗಿದೆ ಎಂದು ಕಿಡಿಕಾರಿದರು.

Related posts

Leave a Reply