Header Ads
Header Ads
Breaking News

ಉಡುಪಿಯಲ್ಲಿ ಭಾರತ ಬಂದ್‌ಗೆ ನೋ ಎಫೆಕ್ಟ್

ಭಾರತ್ ಬಂದ್ ಇಂದು ಎರಡನೇ ದಿನ. ಉಡುಪಿಯಲ್ಲಿ ಮಾತ್ರ ಬಂದ್ ನೀರಸವಾಗಿತ್ತು. ಬಸ್ ಗಳ ಓಡಾಟ ಮಾಮೂಲಿಯಾಗಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು ಬಂದ್ ನಿಂದ ಯಾವುದೇ ಎಫೆಕ್ಟ್ ಉಡುಪಿ ಜಿಲ್ಲೆಗೆ ಆಗಲಿಲ್ಲ.ಆದ್ರೆ ಅಂಚೆ ನೌಕರರ ಪ್ರತಿಭಟನೆ ಮಾತ್ರ ಗಮನ ಸೆಳೆದಿದೆ. ನಿನ್ನೆ ಕೂಡಾ ಡೋಲು ಬಡಿದು ಪ್ರತಿಭಟನೆ ನಡೆಸಿದ್ದ ಅಂಚೆ ನೌಕರರು ಇಂದು ಕೂಡಾ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ವಿನೂತನ ಪ್ರತಿಭಟನೆ ನಡೆಸಿದರು. ಪುಟುಗೋಸಿ, ಕಿವಿಗೆ ಹೂವಿಟ್ಟು ಅಂಚೆ ನೌಕರ ಗಮನಸೆಳೆದರು.ಕೇಂದ್ರ ಸರ್ಕಾರ ನಮ್ಮನ್ನು ಪುಟುಗೋಸಿಯಲ್ಲಿ ನಿಲ್ಲಿಸಿದೆ. ಕಿವಿಗೆ ಹೂವಿಟ್ಟು ಯಾಮಾರಿಸಿದೆ ಅಂತ ಅಣಕಿಸುವ ಮೂಲಕ ಕೇಂದ್ರ ಸರಕಾರದ ನೀತಿಯ ವಿರುದ್ದ ಅಂಚೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply