Header Ads
Breaking News

ಉಡುಪಿಯಲ್ಲಿ ಭೂ ಮಸೂದೆ ಕಾಯ್ದೆ ವಿರೋಧಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಉಡುಪಿ:- ಭೂ ಮಸೂದೆ ಕಾಯ್ದೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವಿನೂತನ ಪ್ರತಿಭಟನೆ ಹಮ್ಮಿಕೊಂಡಿತು. ಬನ್ನಂಜೆ ನಾರಾಯಣ ಗುರು ಸಭಾಂಗಣದಿಂದ ಕಲ್ಸಂಕದವರೆಗೆ 2 ಕಿಲೋ ಮೀಟರ್ ಉದ್ದ ಸಹಿ ಸಂಗ್ರಹದ ಬ್ಯಾನರ್ ರೋಲ್ ಪ್ರದರ್ಶನದೊಂದಿಗೆ ವಿನೂತನ ರೀತಿಯ ಪ್ರತಿಭಟನೆ ನಡೆಯಿತು.

ಭೂ ಮಸೂದೆ ಕಾಯ್ದೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರದಂದು ಸಹಿ ಸಂಗ್ರಹ ಅಭಿಯಾನವು ಬನ್ನಂಜೆ ನಾರಾಯಣ ಗುರು ಸಭಾಂಗಣದಿಂದ ಕಲ್ಸಂಕದವರೆಗೆ ೨ ಕಿಲೋ ಮೀಟರ್ ಉದ್ದ ಸಹಿ ಸಂಗ್ರಹದ ಬ್ಯಾನರ್ ರೋಲ್ ಪ್ರದರ್ಶನದೊಂದಿಗೆ ವಿನೂತನ ರೀತಿಯ ಪ್ರತಿಭಟನೆ ನಡೆಯಿತು. ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭೂ ಮಸೂದೆ ಕಾಯ್ದೆಯ ಮೂಲಕ ಬಡ ರೈತರಿಗೆ ಕೃಷಿಕರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಎಲ್ಲಾ ಕಡೆ ಸಹಿ ಸಂಹ್ರಗ ನಡೆದಿದ್ದು ಇದನ್ನ ಬಳಿಕ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸಹಿ ಸಂಗ್ರಹವನ್ನು ಅನಾವರಣಗೊಳಿಸಲಾಯಿತು.ಬಳಿಕ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಸಲೀಂ ಅಹಮದ್ ಕೇಂದ್ರದ ಭೂ ಸುಧಾರಣೆ ಕಾಯ್ದೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ಪ್ರಖ್ಯಾತ್ ಶೆಟ್ಟಿ, ವೆರೆನಿಕಾ ಕರ್ನೆಲಿಯೋ,ಹರೀಶ್ ಕಿಣಿ ಹಾಗೂ ಇತರರು ಪಾಲ್ಗೊಂಡಿದ್ದರು.

 

Related posts

Leave a Reply

Your email address will not be published. Required fields are marked *