Header Ads
Header Ads
Header Ads
Breaking News

ಉಡುಪಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆ ಪ್ರದರ್ಶನ ಶುಭಾ ರವೀಂದ್ರ ಮನೆಯಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಚಾಕಲೇಟ್‌ನಿಂದಲೇ ತಾಜ್ ಮಹಲ್, ಬಿಸ್ಕೆಟ್‌ಗಳಲ್ಲಿ ಮನೆ ನಿರ್ಮಾಣ

ಇಂದಿನಿಂದ ಎಲ್ಲೆಡೆ ನವರಾತ್ರಿ ಸಂಭ್ರಮ. ನವರಾತ್ರಿಯನ್ನು ರಾಜ್ಯದ ಹಲವೆಡೆ ನಾಡಹಬ್ಬವಾಗಿಯೂ ಆಚರಿಸುತ್ತಾರೆ. ಮೈಸೂರು ಬೆಂಗಳೂರು ಭಾಗಗಳಲ್ಲಿ ದಸರಾ ಹಬ್ಬವಾಗಿ ಮನೆಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವಿದೆ ಆದ್ರೆ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ದಸರಾ ಆಚರಣೆಯಿಲ್ಲದಿದ್ರೂ ಉಡುಪಿಯ ಬೈಲಕೆರೆ ನಿವಾಸಿ ಶುಭಾ ರವೀಂದ್ರ ಅವರು ಮಾತ್ರ ತಮ್ಮ ಮನೆಯಲ್ಲಿ ಕಳೆದ 20ವರ್ಷಗಳಿಂದ ಗೊಂಬೆಗಳನ್ನು ಕೂರಿಸುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ.

ಈ ಬಾರಿ ನವರಾತ್ರಿ ವಿಶೇಷ ಸಾರುವ ಗೊಂಬೆಗಳ ಜೊತೆಗೆ ಚಾಕಲೇಟುಗಳಿಂದಲೇ ತಾಜ್ ಮಹಲ್ ಇದರ ಜೊತೆಗೆ ಬಿಸ್ಕೆಟ್ ಹಾಗೂ ಚಾಕಲೇಟುಗಳಲ್ಲಿ ಮನೆಯನ್ನು ನಿರ್ಮಿಸಿದ್ದಾರೆ ಇದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply