Header Ads
Header Ads
Breaking News

ಉಡುಪಿಯಲ್ಲಿ ಮಳೆ ಕಡಿಮೆ ಆದರೂ ಕಡಲಕೊರೆತ ತೀವ್ರ ರಸೆಯನ್ನ ಆಹುತಿ ಪಡೆಯುತ್ತಿರುವ ರಕ್ಕಸ ಅಲೆಗಳು

ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಕಡಲ್ಕೊರೆತ ತೀವ್ರಗೊಂಡಿದೆ. ಕಡಲ ತಡಿಯ ಒಳ ರಸ್ತೆಗಳಿಗೆ ವೇಗದ ಅಲೆಗಳು ಅಪ್ಪಳಿಸುತ್ತಿವೆ. ಕಡಲ ರಕ್ಕಸ ಅಲೆಗಳು ಉಡುಪಿಯ ಮಲ್ಪೆ ಪಡುಕೆರೆ ಹೆಜಮಾಡಿ ಸಂಪರ್ಕ ರಸ್ತೆಗೆ ತೀವ್ರ ಹಾನಿಯುಂಟು ಮಾಡುತ್ತಿವೆ. ಕೆಲವು ಕಡೆ ಕಾಂಕ್ರೀಟು ರಸ್ತೆ ಬಿರುಕು ಬಿಟ್ಟು ಸಂಚಾರಕ್ಕೆ ಆಡಚಣೆ ಉಂಟಾಗಿದೆ. ಇನ್ನು ಕಡಲ್ಕೊರೆತ ನಡೆದ ಕೆಲ ಪ್ರದೇಶಗಳಲ್ಲಿ ಉಪ್ಪು ನೀರು ಹೊಳೆ ಸೇರುವ ಸಾಧ್ಯತೆ ಇದೆ. ಪ್ರತೀ ಮಳೆಗಾಲಕ್ಕೆ ತಾತ್ಕಾಲಿಕ ತಡೆಗೋಡೆ ಕಾಮಗಾರಿಯೇನೋ ನಡೆಯುತ್ತದೆ. ಆದ್ರೆ ಕಡಲ ರಕ್ಕಸ ಅಲೆಗಳು ತಡೆಗೋಡೆಯ ಕಲ್ಲುಗಳನ್ನು ಆಹುತಿ ತೆಗೆದುಕೊಳ್ಳುತ್ತಿವೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಕೃತಿಯ ಅಬ್ಬರವನ್ನು ನಿಯಂತ್ರಿಸುವುದು ಕಷ್ಟವಾಗಿದೆ.

Related posts

Leave a Reply