Header Ads
Header Ads
Header Ads
Breaking News

ಉಡುಪಿಯಲ್ಲಿ ಮುಸ್ಲಿಂ ಬಾಂಧವರಿಂದ ದೀಪಾವಳಿ ಆಚರಣೆ ದೀಪ ಬೆಳಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಪೇಜಾವರ ಶ್ರೀಗಳ ಇಪ್ತಾರ್ ಕೂಟಕ್ಕಾಗಿ ದೀಪಾವಳಿ ಆಚರಣೆ ಮಾಡಿದ ಮುಸ್ಲಿಂರು

ಇತ್ತೀಚಿಗೆ ಮುಸ್ಲಿಂ ಬಾಂಧವರಿಗೆ ಇಪ್ತಾರ್ ನೀಡುವ ಮೂಲಕ ಪೇಜಾವರ ಶ್ರೀಗಳು ಸೌಹಾರ್ದತೆ ಮೆರೆದಿದ್ದರು. ಇದೀಗ ಅದಕ್ಕೆ ಪ್ರತಿಫಲ ಎಂಬಂತೆ ಮುಸ್ಲಿಂ ಬಾಂಧವರು ದೀಪಾವಳಿ ಆಚರಿಸಿಕೊಂಡು ಸೌಹಾರ್ದತೆ ಮೆರೆದಿದ್ದಾರೆ.

ಇಂದು ಕ್ಲಾಕ್ ಟವರ್ ಸುತ್ತ ಸುಮಾರು 30 ಕ್ಕೂ ಹೆಚ್ಚು ಮುಸ್ಲೀಂ ಬಾಂಧವರು ದೀಪಗಳನ್ನು ಬೆಳಗಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಆಚರಿಸಿಕೊಂಡರು. ಕಳೆದ ಇಪ್ತಾರ್ ಕೂಟದ ನೇತೃತ್ವ ವಹಿಸಿದ್ದ ಅನ್ಸಾರ್ ಅಹಮ್ಮದ್ ಹಾಗೂ ಆರೀಫ಼್ ಕಲ್ಲಟ್ಟ ಅವರು ಈ ದೀಪಾವಳಿ ಆಚರಣೆಯ ನೇತೃತ್ವ ವಹಿಸಿದ್ದರು. ಮುಸ್ಲೀಂ ಬಾಂಧವರು ಸಾರ್ವಜನಿಕರಿಗೆ ದೀಪಾವಳಿಯ ಶುಭಾಶಯಗಳನ್ನು ಕೂಡಾ ಕೋರಿದರು.

Related posts

Leave a Reply