Header Ads
Header Ads
Header Ads
Breaking News

ಉಡುಪಿಯಲ್ಲಿ ಮೂರು ದಿನಗಳ ಧರ್ಮ ಸಂಸದ್:ಗೋಪಾಲ್ ಜಿ

ಉಡುಪಿಯಲ್ಲಿ ನವೆಂಬರ್ 24ರಿಂದ 26ರವರೆಗೆ ಧರ್ಮ ಸಂಸದ್ ನಡೆಯಲಿದ್ದು ಇದಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಸಂತರು ಭಾಗವ್ಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು ಪ್ರಮುಖವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ, ಗೂರಖ್ ಪೀಠದ್ಯಕ್ಷ ಯೋಗಿ ಆದಿತ್ಯನಾಥ್, ಬಾಬಾ ರಾಮ್ ದೇವ್, ರವಿಶಂಕರ್ ಗುರೂಜಿ ಮುಂತಾದವರು ಭಾಗವಹಿಸುತ್ತಾರೆ ಮೂರು ದಿನಗಳ ಧರ್ಮ ಸಂಸದ್ ನಲ್ಲಿ ಅಸ್ಪ್ತ್ರಶ್ಯತೆ, ಗೋರಕ್ಷಣೆ, ಮತಾಂತರ ವಿಚಾರದ ಬಗ್ಗೆ ಸಂತರು ಚರ್ಚೆ ನಡೆಸಲಿದ್ದಾರೆ. ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾನದ ಬಗೆಗಿನ ವಿಚಾರವೂ ಸಹ ಚರ್ಚೆಗೆ ಬರಲಿದೆ.ನಂತರ ಸಂತರು ಈ ಎಲ್ಲಾ ವಿಚಾರದ ಬಗ್ಗೆ ನಿರ್ಣಯ ಮಾಡಲಿದ್ದಾರೆ. ನ.26ರಂದು ರಾಜ್ಯದ ಎಲ್ಲಾ ಜಾತಿ ಪ್ರಮುಖರು ಬರಲಿದ್ದಾರೆ. 3500ಜಾತಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

Related posts

Leave a Reply