Header Ads
Header Ads
Breaking News

ಉಡುಪಿಯಲ್ಲಿ ಯೋಧರಿಗೆ ಕ್ಯಾಂಡಲ್ ನಮನ

ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೂರದಲ್ಲಿ ಭಯೋತ್ಪಾದಕರಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ ವೀರಮರಣವನ್ನಪ್ಪಿದ ದೇಶದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಉಡುಪಿಯ ಸಮಸ್ತ ನಾಗರೀಕರು ಶಾಂತಿ ಕೋರಿದರು. ಉಡುಪಿಯ ಅಜ್ಜರಕಾಡು ಸಮೀಪದ ಸೈನಿಕ ಸ್ಮಾರಕದ ಎದುರು ಈ ಶ್ರದ್ದಾಂಜಲಿ ಸಭೆ ಆಯೋಜಿಸಲಾಗಿತ್ತು.

ಬಿಜೆಪಿ , ಕಾಂಗ್ರೆಸ್, ಜೆಡಿಎಸ್ ,ಲಯನ್ಸ್ ಕ್ಲಬ್ ಪತ್ರಕರ್ತರ ಸಂಘ, ಹೀಗೆ ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಕಾರ್ಯಕರ್ತರು, ನಾಗರೀಕರು ಹುತಾತ್ಮ ಯೋಧರಿಗೆ ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದ್ರು. ದೇಶದ ಹೆಮ್ಮೆಯ ಸೈನಿಕರ ದಾರುಣ ಸಾವಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಯುವ ಜನಾಂಗವೂ ಅಂತಿಮ ನಮನ ಸಲ್ಲಿಸಿದ್ದು ಗಮನ ಸೆಳೆಯಿತು .

Related posts

Leave a Reply

Your email address will not be published. Required fields are marked *